ಅಮೆರಿಕ ನೂತನ ಅಟಾರ್ನಿ ಜನರಲ್ ಆಗಿ ಜೆಫ್ ಸೆಸೆನ್ಸ್ ಆಯ್ಕೆ

Spread the love

Geff-n

ವಾಷಿಂಗ್ಟನ್, ಫೆ.9- ಅಮೆರಿಕ ನೂತನ ಅಟಾರ್ನಿ ಜನರಲ್ ಆಗಿ ಜೆಫ್ ಸೆಸೆನ್ಸ್ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ 70 ವರ್ಷದ ಸೆಸೆನ್ಸ್ ಅವರು ಅಲ್‍ಬಾಮ ಸೆನೆಟ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಟ್ರಂಪ್ ಅವರ ಪರಮಾಪ್ತ ಸೆಸೆನ್ಸ್ ಹೊಸ ಉತ್ಸಾಹದೊಂದಿಗೆ ನೂತನ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದಕ್ಕೂ ಮುನ್ನ ಸೆಸೆನ್ಸ್ ಅವರು ರಿಪಬ್ಲಿಕನ್ ಸೆನೆಟರ್ ಅತ್ಯುತ್ತಮ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದರು. ಅಮೆರಿಕ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಜಿಒಪಿ, ಎಚ್-1ಬಿ ವೀಸಾ ನಿಷೇಧಿಸುವ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೆಸೆನ್ಸ್ ಅಪರಾದ ಮತ್ತು ಹಿಂಸೆಗಳಿಂದ ಅಮೆರಿಕದ ಜನರನ್ನು ರಕ್ಷಿಸಲು ಅಧ್ಯಕ್ಷ ಟ್ರಂಪ್ ಮುಂದಾಗಿದ್ದು, ನನ್ನನ್ನು ಅತ್ಯಂತ ದೊಡ್ಡ ಹುದ್ದೆಗೆ ನೇಮಕ ಮಾಡಿದಕ್ಕೆ ಅವರಿಗೆ ಧನ್ಯವಾದ ತಿಳಿಸಿದ್ದಾರೆ.  ಏಳು ಮುಸ್ಲಿಂ ದೇಶಗಳಿಗೆ ವಲಸೆ ಹೋಗಲು ನಿಷೇಧ, ಎಚ್-1ಬಿ ವೀಸಾ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವೆ ಸಂಘರ್ಷ ಏರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಬಗೆಹರಿಸಲು ಸೆಸೆನ್ಸ್ ಮುಂದಾಗಲಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin