ಅಮೆರಿಕ ವಾಯು ದಾಳಿಯಲ್ಲಿ ಅಲ್‍ಖೈದಾ ನಾಯಕ ಫಾರೂಖ್ ಅಲ್-ಖತಾನಿ ಖತಂ

Afghanistan

ವಾಷಿಂಗ್ಟನ್, ನ.5-ಈಶಾನ್ಯ ಅಫ್ಘಾನಿಸ್ತಾನದ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಅಲ್-ಖೈದಾ ಪ್ರಮುಖ ನಾಯಕನೊಬ್ಬ ಹತನಾಗಿರುವುದನ್ನು ಅಮೆರಿಕ ಖಚಿತಪಡಿಸಿದ್ದು, ಸಮರ ಸಂತ್ರಸ್ತ ದೇಶದಲ್ಲಿ ಭಯೋತ್ಪಾದಕ ಸಂಘಟನೆಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ.  ಅಫ್ಘಾನಿಸ್ತಾನದ ಕುನಾರ್‍ನಲ್ಲಿ ಅ.23ರಂದು ಅಮೆರಿಕ ಮಿಲಿಟರಿ ಕೈಗೊಂಡ ಅತ್ಯಂತ ನಿಖರ ವಾಯು ದಾಳಿಯಲ್ಲಿ ಅಲ್-ಖೈದಾದ ಹಿರಿಯ ನಾಯಕ ಫಾರೂಖ್ ಅಲ್-ಖತಾನಿ ಖತಂ ಆಗಿದ್ದಾನೆ ಎಂದು ಅಮೆರಿಕ ರಕ್ಷಣಾ ಇಲಾಖೆ-ಪೆಂಟಗನ್‍ನ ಪತ್ರಿಕಾ ಕಾರ್ಯದರ್ಶಿ ಪೀಟರ್ ಕುಕ್ ದೃಢಪಡಿಸಿದ್ದಾರೆ.

ಅಲ್-ಖತಾನಿ ಪೂರ್ವ ಅಫ್ಘಾನಿಸ್ತಾನದ ಅಲ್-ಖೈದಾ ಮುಖಂಡನಾಗಿದ್ದ ಹಾಗೂ ಅಮೆರಿಕ ಮೇಲೆ ದಾಳಿಗಳಲ್ಲಿ ಪ್ರಮುಖ ಸಂಚುಗಾರರಲ್ಲಿ ಒಬ್ಬನಾಗಿದ್ದ ಎಂದು ಅವರು ಹೇಳಿದ್ದಾರೆ.
ಅಮೆರಿಕ ಕಳೆದ ಐದು ವರ್ಷಗಳಿಂದ ಈತನನ್ನು ಬೇಟೆಯಾಡಲು ಯತ್ನಿಸುತ್ತಿತ್ತು. ಪಾಕಿಸ್ತಾನದಲ್ಲಿ 2011ರಲ್ಲಿ ಅಲ್-ಖೈದಾ ಪರಮೋಚ್ಚ ನಾಯಕ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ನಂತರ ತಪ್ಪಿಸಿಕೊಂಡಿದ್ದ ಅಲ್-ಖತಾನಿ ಈಗ ವಾಯು ದಾಳಿಯಲ್ಲಿ ಬಲಿಯಾಗಿರುವುದು, ಉಗ್ರಗಾಮಿ ಸಂಘಟನೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin