ಅಮೇರಿಕದಲ್ಲಿ ನಿಲ್ಲದ ಜನಾಂಗಿಯ ದಾಳಿ : ತೆಲಂಗಾಣ ಮೂಲದ ವ್ಯಕ್ತಿ ಮೇಲೆ ಗುಂಡಿನ ಫೈರಿಂಗ್

America-Telangana

ನವದೆಹಲಿ,ಜೂ.9– ಅಮೇರಿಕದಲ್ಲಿ ಭಾರತಿಯರ ಮೆಲಿನ ಹಿಂಸಾತ್ಮಕ ಜನಾಂಗಿಯ ದಾಳಿ ಮತ್ತೆ ಮುಂದುವರೆದಿದ್ದು, ಕ್ಯಾಲಿಫೋರ್ನಿಯಾ ಮಳಿಗೆಯೊಂದರಲ್ಲಿ ತೆಲಂಗಾಣ ಮೂಲದ ವ್ಯಕ್ತಿ ಮೇಲೆ ಕಳೆದ ರಾತ್ರಿ ಗುಂಡಿನ ದಾಳಿ ನಡೆದಿದೆ.  ತೆಲಂಗಾಣ ರಾಜ್ಯದ ಮುಬೀನ್ ಅಹ್ಮದ್ (26) ಗುಂಡಿನ ದಾಳಿಗೆ ಒಳಗಾದ ಭಾರತೀಯ. ಕ್ಯಾಲಿಫೋರ್ನಿಯಾದ ಮಳಿಗೆಯೊಂದರಲ್ಲಿ ಮುಬೀನ್ ಅಹ್ಮದ್ ಕೆಲಸ ಮಾಡುತ್ತಿದ್ದರು. ಈ ವೇಳೆ ಮಳಿಗೆಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅಹ್ಮದ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ನಡುವೆ ಮಗನ ಭೇಟಿಗಾಗಿ ಅಹ್ಮದ್ ಪೋಷಕರು ತೆಲಂಗಾಣ ಸರ್ಕಾರದ ನೆರವು ಕೇಳಿದ್ದಾರೆ.ಮೊಬೈಲ್ ಮಳಿಗೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಅಹ್ಮದ್ ಮೇಲೆ ದಾಳಿಕೋರರು ಏಕಾಏಕಿ ದಾಳಿ ನಡೆಸಿದರು. ಅವನ ಬಳಿ ಇದ್ದ ಹಣ ಹಾಗೂ ಮೊಬೈಲï ಕಿತ್ತುಕೊಳ್ಳಲು ಯತ್ನಸಿದ್ದಾರೆ. ಈ ವೇಳೆ ಅಹ್ಮದ್ ಪ್ರತಿರೋಧ ಒಡ್ಡಿದಾಗ ದಾಳಿಕೋರರು ಗುಂಡು ಹಾರಿಸಿದ್ದಾರೆ ಎಂದು ಅಹ್ಮದï ಚಿಕ್ಕಪ್ಪ ಮುಫ್ಟಿ ಅಸ್ಲಾಮ್ ಒಸ್ಮನ್ ಹೇಳಿದ್ದಾರೆ.  ಅಮೆರಿಕಾದಲ್ಲಿ ಭಾರತಿಯ ಮೂಲದ ಜನರ ಮೇಲೆ ಆಕ್ರಮಣಗಳು ಹೆಚ್ಚಾಗಿ ನಡೆಯುತ್ತಿವೆ. ಫೆಬ್ರವರಿಯಲ್ಲಿ ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ 26 ವರ್ಷದ ಯುವಕನ ಮೇಲೆ ಕ್ಯಾಲಿಫೋರ್ನಿಯಾದಲ್ಲಿ ಹಲ್ಲೆ ಮಾಡಲಾಗಿತ್ತು

ಮಾಹಿತಿ ಕೇಳಿದ ಕೇಂದ್ರ ಸರ್ಕಾರ:

ಕಳೆದ ಜೂ.4ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜï ರಾಯಭಾರ ಕಚೇರಿಯಿಂದ ಮಾಹಿತಿ ಕೇಳಿದ್ದಾರೆ. ಸುಷ್ಮಾ ಮಾಡಿರುವ ಟ್ವೀಟ್ಅನ್ವಯ ದಾಳಿಗೊಳಗಾದ 26 ವರ್ಷದ ಮುಬೀನ್ ಅಹ್ಮದ್ ತೆಲಂಗಾಣ ಮೂಲದವನಾಗಿದ್ದು, ಕ್ಯಾಲಿಫೋರ್ನಿಯಾದ ಗ್ಯಾಸ್‍ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ.


ಆತನ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಪ್ರಸ್ತುತ ಆತನನ್ನು ಈಡನ್ ಮೆಡಿಕಲ್  ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಾವೂ ಕೂಡ ತನಿಖೆಯ ವರದಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.  ಮುಬೀನ್ ಅವರ ಸಂಬದಿಯೊಬ್ಬರು ಹೇಳಿಕೆ ನೀಡಿದ್ದು, ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮುಬೀನ್‍ನ ಮೇಲೆ ಕೆಲ ಕಪ್ಪುವರ್ಣೀಯ ಯುವಕರ ತಂಡ ದಾಳಿ ಮಾಡಿದೆ. ಈ ವೇಳೆ ಆತನಿಂದ ಹಣ ಕಿತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

2015ರ ಫೆಬ್ರವರಿಯಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆಯಲು ಮುಬೀನ್ ಅಹ್ಮದ್ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದರು. ಇದಕ್ಕೂ ಮೊದಲು ರಾಯಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ ಸೈನ್ಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಕ್ ಮಾಡಿದ್ದ ಮುಬೀನ್ ಅಹ್ಮದ್ ಅಲ್ಲಿನ ಸ್ಥಳೀಯ ಡಿಪಾರ್ಟ ಮೆಂಟಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin