ಅಮೇರಿಕಾದ ಸ್ಪೇಸ್ X ಉಡಾವಣಾ ಸ್ಥಳದಲ್ಲಿ ಭಾರೀ ಸ್ಫೋಟ : ರಾಕೆಟ್, ಉಪಗ್ರಹ ಧ್ವಂಸ

Spread the love

Space-X

ವಾಷಿಂಗ್ಟನ್, ಸೆ.1-ಅಮೇರಿಕಾದ  ಫ್ಲಾರಿಡಾದ ಕೇಪ್ ಕನವೆರಲ್ನ ಸ್ಪೆಸ್ X ಉಡಾವಣಾ ಸ್ಥಳದಲ್ಲಿ ನಿನ್ನೆ ಫಾಲ್ಕನ್ ರಾಕೆಟ್ 9 ಉಡ್ಡಯನದ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ರಾಕೆಟ್ ಮತ್ತು ಉಪಗ್ರಹ ಸಂಪೂರ್ಣ ಧ್ವಂಸಗೊಂಡಿದೆ. ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ ಅಪಾರ ಹಾನಿ ಉಂಟಾಗಿದೆ.  ಸ್ಪೆಸ್ಎಕ್ಸ್ ಲಾಂಚ್ ಸೆಂಟರ್ನಲ್ಲಿ ಬೆಳಿಗ್ಗೆ ತನ್ನ ಮಾನವರಹಿತ ರಾಕೆಟ್ ಪರೀಕ್ಷಾರ್ಥ ಹಾರಾಟವನ್ನು ನಡೆಸುತ್ತಿದ್ದಾರೆ ಭಾರೀ ಆಸ್ಫೋಟ ಸಂಭವಿಸಿತು. ಅಮೆರಿಕ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ-ನಾಸಾದ ಪಕ್ಕದಲ್ಲಿರುವ ಕೆಪ್ ಕನವೆರಲ್ ವಾಯುಪಡೆ ನೆಲೆಯಿಂದ ನಾಳೆ ಉದ್ದೇಶಿತ ಉಡಾವಣೆಗೆ ಮುನ್ನ ಸ್ಪೆಸ್ಎಕ್ಸ್ನಲ್ಲಿ ಈ ಪ್ರಯೋಗ ನಡೆಸಿದ ಕೆಲವೇ ಕ್ಷಣಗಳಲ್ಲಿ ದುರ್ಘಟನೆ ಸಂಭವಿಸಿತು.

ಈ ಸ್ಫೋಟದಲ್ಲಿ ಸಾವು-ನೋವು ಸಂಭವಿಸಿಲ್ಲ. ಆದರೆ 95 ದಶಲಕ್ಷ ಡಾಲರ್ ಮಲ್ಯದ ರಾಕೆಟ್ ಮತ್ತು ಉಪಗ್ರಹ ಸಂಪೂರ್ಣ ನಾಶವಾಗಿದೆ. ವಿಜನಿಗಳ ಅಪಾರ ಪರಿಶ್ರಮ ವ್ಯರ್ಥವಾಗಿದೆ ಎಂದು ಉನ್ನತಾಧಿಕಾರಿಗಳು ಬೇಸರದಿಂದ ನುಡಿದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin