‘ಅಮ್ಮ’ನಿಗೆ ಅಂತಿಮ ನಮನ ಸಲ್ಲಿಸಿದ ನಟ ಅಜಿತ್ ಕುಮಾರ್

Spread the love

Ajith-Kumar

ಚೆನ್ನೈ ಡಿ.07 : ವಿದೇಶಕ್ಕೆ ತೆರಳಿದ್ದರಿಂದ ಜಯಲಲಿತಾ ಅವರ ಅಂತಿಮ ದರ್ಶನ ಪಡೆಯಲು ನಿನ್ನೆ ಸಾಧ್ಯವಾಗದ ಕಾರಣ ನಟ ಅಜಿತ್ ಕುಮಾರ್ ಬೆಳಗಿನ ಜಾವ 4 ಗಂಟೆಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ನೇರವಾಗಿ ಮರೀನಾ ಬೀಚ್ ಗೆ ತೆರಳಿ. ಜಯಲಲಿತಾ ಅವರ ಸಮಾಧಿಗೆ ಹೂಗುಚ್ಛ ಇರಿಸಿ ನಮನ ಸಲ್ಲಿಸಿದ್ದಾರೆ. ವಿದೇಶದಲ್ಲಿದ್ದ ಕಾರಣ ಅಜಿತ್ ಸರಿಯಾದ ಸಮಯಕ್ಕೆ ಚೆನ್ನೈ ಆಗಿರಲಿಲ್ಲ. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇಂದು ಚೆನ್ನೈಗೆ ಆಗಮಿಸಿದ ಕೂಡಲೇ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದ್ದಾರೆ. ಅಜಿತ್ ಅವರೊಂದಿಗೆ ಅವರ ಪತ್ನಿ, ನಟಿ ಶಾಲಿನಿ ಮೊದಲಾದವರು ಇದ್ದರು. ಸಮಾಧಿ ಸ್ಥಳಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin