ಅಯೋಧ್ಯಾ ರಾಮಮಂದಿರ ವಿವಾದವನ್ನು ಸೌಹಾರ್ದಯುತ ಇತ್ಯರ್ಥಕ್ಕೆ ಸುಪ್ರೀಂ ಸಲಹೆ
ನವದೆಹಲಿ, ಮಾ.21- ಅಯೋಧ್ಯಾ ರಾಮಮಂದಿರ ವಿವಾದವನ್ನು ಸೌಹಾರ್ದಯುತವಾಗಿ ಒಮ್ಮತದಿಂದ ಇತ್ಯರ್ಥಗೊಳಿಸುವಂತೆ ಸುಪ್ರೀಂಕೋರ್ಟ್ ಇಂದು ಸಲಹೆ ಮಾಡಿದೆ. ಇದು ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯ. ಹೀಗಾಗಿ ಇದನ್ನು ಸಂಬಂಧಪಟ್ಟವರೆಲ್ಲರೂ ಪರಸ್ಪರ ಚರ್ಚಿಸಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠ ಸಲಹೆ ಮಾಡಿದೆ. ಈ ವಿವಾದದ ಬಗ್ಗೆ ತುರ್ತು ವಿಚಾರಣೆ ನಡೆಸುವಂತೆ ಕೋರಿ ಬಿಜೆಪಿ ನಾಯಕ ಡಾ.ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.’
ಎಲ್ಲಾ ಪಕ್ಷಗಳು ಒಂದೆಡೆ ಸೇರಿ ಈ ವಿಷಯದ ಬಗ್ಗೆ ಸಮಾಲೋಚಿಸಬೇಕು. ಯಾವುದೇ ಪ ಕ್ಷಗಳು ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದರೆ ತಾವು ಸಿದ್ಧವೆಂದು ನ್ಯಾ.ಖೇಹರ್ ಹೇಳಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ.31ಕ್ಕೆ ನಿಗದಿಗೊಳಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >