ಅರ್ಜಿ ಸಲ್ಲಿಸಿದ 15 ದಿನದೊಳಗಾಗಿ ಸಿಗುತ್ತೆ ರೇಷನ್ ಕಾರ್ಡ್

Reshan-Card

ಬೆಳಗಾವಿ (ಸುವರ್ಣಸೌಧ), ನ.21-ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿ ಪಡೆಯಲು ಯಾರೇ ಅರ್ಜಿ ಸಲ್ಲಿಸಿದರೂ 15 ದಿನಗಳೊಳಗೆ ಪಡಿತರ ಚೀಟಿ ವಿತರಣೆ ಮಾಡುವ ಯೋಜನೆಗೆ ಡಿಸೆಂಬರ್ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಯು.ಟಿ.ಖಾದರ್ ಪರಿಷತ್ತಿನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಐವಾನ್ ಡಿಸೋಜಾ ಅವರಿಗೆ ಉತ್ತರಿಸಿದ ಸಚಿವರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಭಾಗಿತ್ವದಲ್ಲಿ ಈ ವ್ಯವಸ್ಥೆ ಜಾರಿಗೆ ಮಾಡಲಾಗುವುದು. ಡಿಸೆಂಬರ್‍ನಲ್ಲಿ ತಿಂಗಳ ಅಂಗ್ಯಕ್ಕೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಘೋಷಿಸಿದರು.

ಫಲಾನುಭವಿಗಳು ತಮ್ಮ ಅರ್ಜಿಯನ್ನು ಗ್ರಾಮ ಪಂಚಾಯ್ತಿಗೆ ಸಲ್ಲಿಸಬೇಕು. ಆಧಾರ್‍ಕಾರ್ಡ್ ಮಾನದಂಡವಾಗಿದ್ದು, ಕನಿಷ್ಠ 15 ದಿನಗಳಲ್ಲಿ ಅವರ ಮನೆಬಾಗಿಲಿಗೆ ಪೆÇೀಸ್ಟ್ ಮೂಲಕ ಕಾರ್ಡ್ ವಿತರಿಸಲಾ ಗುವುದು. ಇದರಿಂದ ಪಡಿತರ ಚೀಟಿ ಪಡೆಯಲು ಎದು ರಾಗುತ್ತಿದ್ದ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಮೊದಲು ಪಡಿತರ ಚೀಟಿ ಪಡೆಯಲು 14 ಮಾನದಂಡಗಳನ್ನು ನಿಗದಿ ಮಾಡಲಾಗಿತ್ತು, ಇದನ್ನು ಸರಳೀಕರಣ ಮಾಡಿ ನಾಲ್ಕಕ್ಕೆ ಇಳಿಸಲಾಯಿತು. ಫಲಾನುಭವಿ ತೆರಿಗೆ ಪಾವತಿ ಮಾಡಬಾರದು, ದ್ವಿಚಕ್ರ ವಾಹನವಿರಬಾರದು, ಇನ್ನೂ ಕೆಲವು ಮಾರ್ಗಸೂಚಿಗಳು ನಿಗದಿಯಾಗಿದ್ದವು.


[poll id=”20″]


ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಾಡಿಗೆ ಮನೆ ಇರುವವರಿಗೆ ಸಮಸ್ಯೆ ಯಾಗುತ್ತದೆ ಎಂಬ ಕಾರಣಕ್ಕೆ ಸರಳೀಕರಣಗೊಳಿಸಲಾಗಿದೆ. ಉಳಿದಂತೆ ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದವರು ಅರ್ಜಿ ಸಲ್ಲಿಸಬಹುದೆಂದು ಮಾಹಿತಿ ನೀಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 25 ಲಕ್ಷ ಬಿಪಿಎಲ್ ಕಾರ್ಡ್‍ಗಳನ್ನು ವಿತರಿಸಿದ್ದೇವೆ. 3 ತಿಂಗಳ ಹಿಂದೆ ಕಾರ್ಡ್ ವಿತರಣೆ ನಿಲ್ಲಿಸಲಾಗಿದೆ. ಕೆಲವು ತಾಂತ್ರಿಕ ಕಾರಣ ಎದುರಾಗಿದ್ದರಿಂದ ಈ ತೊಂದರೆ ಉಂಟಾಗಿತ್ತು ಎಂದರು.

► Follow us on –  Facebook / Twitter  / Google+

Sri Raghav

Admin