ಅರ್ಥಗರ್ಭಿತವಾಗಿ ಮಾತನಾಡಿದ ರವೀನಾ

Spread the love

raveena-tendar

ಬೇಹುಗಾರಿಕೆ ಆರೋಪದ ಮೇಲೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಮರಣದಂಡನೆ ವಿಧಿಸಿರುವ ಬಗ್ಗೆ ಬಾಲಿವುಡ್ ಅಭಿನೇತ್ರಿ ರವೀನಾ ಟಂಡನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಒಂದೇ ಮನುಕುಲದವರು. ಮಾನವೀಯತೆಯೇ ಸರ್ವಶ್ರೇಷ್ಠ ಧರ್ಮ ಎಂಬುದು ನನ್ನ ನಂಬಿಕೆ. ಮಾನವೀಯತೆ ನಮ್ಮ ಹೊಸ ಧರ್ಮವಾಗಬೇಕು. ಈ ಧ್ಯೇಯವನ್ನು ನಾವೆಲ್ಲರೂ ಪರಿಪಾಲಿಸಿದರೆ ಯುದ್ಧಗಳು ಉದ್ಭವವಾಗುವುದೇ ಇಲ್ಲ ಎಂದು ರವೀನಾ ಅರ್ಥಗರ್ಭಿತವಾಗಿ ಮಾತನಾಡಿದ್ದಾಳೆ. ಹಿಂದಿ ಚಿತ್ರರಂಗಕ್ಕೆ ಮತ್ತೆ ಪ್ರವೇಶಿಸಿರುವ ರವೀನಾ ತಾವು ತಾಯಿಯಾಗಿ ನಟಿಸುತ್ತಿರುವ ಮಾತರ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕುಲಭೂಷಣ್ ವಿಷಯದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನನಗಂತೂ ಯುದ್ಧಗಳಲ್ಲಿ ನಂಬಿಕೆ ಇಲ್ಲ. ದೇಶದ ಗಡಿ ಯಾವುದೇ ಆಗಿರಲಿ ಒಬ್ಬ ವ್ಯಕ್ತಿಯ ನರವನ್ನು ಯಾರೋ ಒಬ್ಬರು ಕತ್ತರಿಸಿದರೆ ಕೆಂಪು ರಕ್ತ ಹರಿಯುತ್ತದೆ ಹೊರತು ಹಸಿರು ಅಥವಾ ನೀಲಿ ರಕ್ತವಲ್ಲ. ಅಲ್ಲವೇ? ನಾವೆಲ್ಲ ಒಂದೇ ಮನುಕುಲದವರು. ಮಾನವೀಯತೆ ನಮ್ಮೆಲ್ಲರ ನವೀನ ಧರ್ಮವಾಗಬೇಕು. ಧರ್ಮದ ಹೆಸರಿನಲ್ಲಿ ಹಿಂಸಾಚಾರ ಮತ್ತು ಯುದ್ಧಗಳು ನಡೆಯುತ್ತಿರುವುದು ದುರುದೃಷ್ಟಕರ. ಹಿಂದು, ಇಸ್ಲಾಂ ಅಥವಾ ಕ್ರೈಸರ ನಡುವೆ ಯಾವುದೇ ಭಿನ್ನಾಭಿಪ್ರಾಯ ತಲೆದೋರಬಾರದು. ಪಾಕಿಸ್ತಾನವು ಮಾನವೀ ಯತೆಯಿಂದ ನಡೆದು ಕೊಂಡು ಕುಲಭೂಷಣ್ ಅವರಿಗೆ ಜೀವದಾನ ಮಾಡಬೇಕು. ಈ ಕುರಿತು ತಾವು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೇನೆ ಎಂದು ಆರ್‍ಟಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin