ಅರ್ಧ ಕಿಲೋ ಮೀಟರ್’ವರೆಗೆ ಪೊಲೀಸ್ ಪೇದೆಯನ್ನು ಎಳೆದೊಯ್ದ ಕುಡುಕ ಕಾರು ಡ್ರೈವರ್

Police

ಥಾಣೆ, ಸೆ.4-ವಿರುದ್ಧ ದಿಕ್ಕಿನಲ್ಲಿ ಬಂದಿದ್ದಕ್ಕೆ ಗಾಡಿ ನಿಲ್ಲಿಸುವಂತೆ ಹೇಳಿದ ಪೊಲೀಸ್ ಪೇದೆಯನ್ನು ಸುಮಾರು ಅರ್ಧ ಕಿಲೋ ಮೀಟರ್ವರೆಗೆ ಎಳೆದುಕೊಂದು ಹೋದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದೆ. ಥಾಣೆಯ ಶಾಸ್ತ್ರೀ ನಗರ ನಿವಾಸಿ 28 ವರ್ಷದ ಯೋಗೇಶ್ ಭಮ್ರೆ ಬಂಧಿತ ವ್ಯಕ್ತಿ.  ಟ್ರಾಫಿಕ್ ಪೊಲೀಸ್ ನರಸಿಂಗ್ ಮಹಾಪುರೆ (47) ಇಲ್ಲಿನ ಟಿನ್ಹಾತ್ ನಾಕಾ ಜಂಕ್ಷನ್ ಬಳಿ ಕಾರ್ಯ ನಿರ್ವಹಿಸುತ್ತಿದ್ದಾಗ ಯುವಕ ಯೋಗೇಶ್ ಭಮ್ರೆ ವಿರುದ್ಧ ದಿಕ್ಕಿನಿಂದ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಇದನ್ನು ನೋಡಿದ ಟ್ರಾಫಿಕ್ ಪೊಲೀಸ್ ನರಸಿಂಗ್ ಮಹಾಪುರೆ, ಕಾರು ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಯುವಕ ನಿಲ್ಲದೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ.

ಈ ವೇಳೆ ಟ್ರಾಫಿಕ್ ಪೊಲೀಸ್ ಕಾರಿನ ಬಾನೆಟ್ ಹಿಡಿದುಕೊಂಡಿದ್ದಾರೆ. ಆದರೂ ಕಾರು ನಿಲ್ಲಿಸದ ಯುವಕ ಅವರನ್ನು ಸುಮಾರು ಅರ್ಧ ಕಿ. ಮೀ ವರೆಗೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಕೆಲ ಆಟೋ ಚಾಲಕರು ಮಧ್ಯ ಪ್ರವೇಶಿಸಿ ಕಾರು ನಿಲ್ಲಿಸಿದ್ದಾರೆ. ಪರಿಣಾಮ ಟ್ರಾಫಿಕ್ ಪೊಲೀಸ್ ನರಸಿಂಗ್ ಮಹಾಪುರೆ ಜೀವ ಉಳಿದಿದೆ. ಬಳಿಕ ಕಾರು ಚಾಲಕ ಯೋಗೇಶ್ ಭಮ್ರೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಪೊಲೀಸ್ ಮಹಾಪುರೆ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ಡಿಸಿಪಿ ಎಸ್. ಬಿ ಪಲ್ವೆ ತಿಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin