ಅಲಹಾಬಾದ್ ರೈಲ್ವೆ ನಿಲ್ದಾಣದ ಬಳಿ ಭಾರಿ ಸ್ಫೋಟಕ ಪತ್ತೆ
ಅಲಹಾಬಾದ್, ಸೆ.3-ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಚೀಲವೊಂದರಲ್ಲಿ ಪತ್ತೆಯಾದ ಭಾರೀ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಅಲಹಾಬಾದ್ ರೈಲ್ವೆ ಸ್ಟೇಷನ್ನಿಂದ ಕೆಲವೇ ಮೀಟರ್ಗಳ ದೂರದಲ್ಲಿ ಮರವೊಂದರ ಕೆಳಗೆ ಚೀಲವೊಂದು ಕಂಡುಬಂದಿತು. ರೇಲ್ವೆ ಪೊಲೀಸ್ ಪೇದೆಯೊಬ್ಬರು ಪರಿಶೀಲಿಸಿದಾಗ ಅದರಲ್ಲಿ ಶಸ್ತ್ರಾಸ್ತ್ರಗಳು, ಹ್ಯಾಂಡ್ ಗ್ರೆನೇಡ್’ಗಳು ಮತ್ತು ಲಾಂಚರ್ಗಳು ಪತ್ತೆಯಾದವು. ರೇಲ್ವೆ ಪೊಲೀಸರು ಇವುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.