ಅಹಿಂದಗೆ ಸರ್ಕಾರದಿಂದ ಶೂನ್ಯ ಕೊಡುಗೆ

BJP

ಪಾಂಡವಪುರ, ನ.28- ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಗಳಾ ನವೀನ್‍ಕುಮಾರ್ ಆರೋಪಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಬಲವರ್ಧನೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಯಾಗುವ ಮೊದಲು ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ತಾನು ಅಹಿಂದ ವರ್ಗದಿಂದ ಬಂದವನೆಂದು ಹೇಳಿಕೊಂಡು ಅಹಿಂದ ಮತಗಳನ್ನು ಪಡೆದು ಚುನಾಯಿತರಾದರು. ಬಳಿಕ ಅಧಿಕಾರಕ್ಕೆ ಬಂದು ಅಹಿಂದ ವರ್ಗಗಳ ಹಿತವನ್ನು ಮರೆತರು. ಅಹಿಂದ ವರ್ಗಗಳ ಅಭಿವೃದ್ಧಿ ಏನೇನೂ ಮಾಡದ ಸಿದ್ದರಾಮಯ್ಯ ಅವರದ್ದು ಹಿಂದುಳಿದ ವರ್ಗಗಳಿಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದು ಲೇವಡಿ ಮಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಪ.ಮ.ರಮೇಶ್ ಮಾತನಾಡಿ, ಬಿಜೆಪಿ ಶಕ್ತಿ ಕೇಂದ್ರಗಳ ಬಲವರ್ಧನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.ತಾಲೂಕು ರೈತಮೋರ್ಚಾ ಅಧ್ಯಕ್ಷ ನೀಲನಹಳ್ಳಿ ಧನಂಜಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮುಖಂಡರಾದ ಕೃಷ್ಣಪ್ಪ, ಚಿಕ್ಕಮರಳಿ ನವೀನ್‍ಕುಮಾರ್, ಸ್ಟುಡಿಯೋ ಅಶೋಕ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಣಿವೆ ಮಹೇಶ್, ಸಣ್ಣ ಕೈಗಾರಿಕೆಗಳ ಪ್ರಕೋಷ್ಟದ ಸಂಚಾಲಕ ಉದಯ್ ಉಪಸ್ಥಿತರಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin