ಆಂಬ್ಯುಲೆನ್ಸ್ ಸೌಲಭ್ಯ ಒದಗಿಸದ ಸಿಬ್ಬಂದಿ, ಪ್ಲ್ಯಾಸಿಕ್ ಚೀಲದಲ್ಲಿ ಕೊಳೆತು ಶವಸಾಗಿಸಿದರು..! 

Dead-Body

ನವದೆಹಲಿ, ಸೆ. 28- ಆಂಬ್ಯುಲೆನ್ಸ್ ನಿರಾಕರಣೆಯಿಂದ ಕುಟುಂಬವೊಂದು ಶವ ಸಾಗಿಸಲು ಅನುಭವಿಸಿದ ಪಡಿಪಾಟಲಿನ ಮತ್ತೊಂದು ಮನ ಕಲಕುವ ಘಟನೆ ಬಿಹಾರದಿಂದ ವರದಿಯಾಗಿದೆ.
ಆಸ್ಪತ್ರೆಯ ಅಂಬ್ಯುಲೆನ್ಸ್ ಸೌಲಭ್ಯ ಇಲ್ಲದೇ ತಮ್ಮ ಕುಟುಂಬದ ಸದಸ್ಯರ ಶವಗಳನ್ನು ತಾವೇ ಹೊತ್ತು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ನತದೃಷ್ಟರು ಹೊತ್ತೊಯ್ದದ್ದು ನೆನಪಿನಲ್ಲಿರುವಾಗಲೇ ಅದೇ ರೀತಿ ಇನ್ನೊಂದು ಘಟನೆ ಮರುಕಳಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.  ಬಿಹಾರದ ಕತಿಹಾರ್‍ನ ಸರ್ದಾರ್ ಹಾಸ್ಟಿಟಲ್‍ನಲ್ಲಿ ಮರಣೋತ್ತರ ಪರೀಕ್ಷೆಗೆ ಬಂದಿದ್ದ ಕೊಳೆತು ನಾರುತ್ತಿದ್ದ ಶವವನ್ನು ಸಾಗಿಸಲು ಸಿಬ್ಬಂದಿ ಆಂಬ್ಯುಲೆನ್ಸ್ ಸೌಲಭ್ಯ ಒದಗಿಸದ ಕಾರಣ ಮೂರು ಮಂದಿ ಹಳೆಯ ಪ್ಲ್ಯಾಸ್ಟಿಕ್ ಚೀಲದಲ್ಲಿ ಶವ ಇರಿಸಿ ಹೊತ್ತು ಸಾಗಿದ ಘಟನೆ ನಡೆದಿದೆ.
ಕುರ್‍ಸೆಲಾದಲ್ಲಿ ಎರಡು ವಾರಗಳ ಹಿಂದೆ ಗಂಗಾ ನದಿಯಲ್ಲಿ ಮುಳಗಿದ್ದ ಸಿಂಟು ಕುಮಾರ್ ಎಂಬಾತನ ಕೊಳೆತ ಶವ ಸೆ.25ರಂದು ಪತ್ತೆಯಾಗಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಕತಿಹಾರ್‍ನ ಸರ್ದಾರ್ ಹಾಸ್ಪಿಟಲ್‍ಗೆ ತರಲಾಗಿತ್ತು.

ಆದರೆ, ಶವ ಸಂಪೂರ್ಣ ಕೊಳೆತು ನಾರುತ್ತಿದ್ದ ಕಾರಣ ಈ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿ, 86 ಕಿ.ಮೀ. ದೂರದಲ್ಲಿರುವ ಭಾಗಲ್ಪುರ್‍ಗೆ ಕೊಂಡೊಯ್ಯವಂತೆ ಸೂಚಿಸಲಾಯಿತು. ಅಲ್ಲಿಗೆ ಶವವನ್ನು ಒಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡಬೇಕೆಂದು ಸಿಂಟು ಕುಮಾರ್ ಕುಟುಂಬದ ಸದಸ್ಯರು ಪರಿಪರಿಯಾಗಿ ಬೇಡಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ.   ನಂತರ ಮೂರು ಮಂದಿ ಅಲ್ಲಿದ್ದ ಹಳೆ ಪ್ಲ್ಯಾಸ್ಟಿಕ್ ಚೀಲದಲ್ಲಿ ಕುಮಾರನ ಶವವನ್ನು ತುರುಕಿ ಅಲ್ಲಿಂದ ಕೊಂಡೊಯ್ದರು.  ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗದ ಕಾರಣ ಭಾಗಲ್ಪುರ್‍ಗೆ ಕೊಂಡ್ಯೊಯಲು ತಿಳಿಸಲಾಯಿತು. ನಮ್ಮಲ್ಲಿ ಆಂಬ್ಯುಲೆನ್ಸ್ ಸೌಲಭ್ಯವಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದು ಪೆÇಲೀಸರ ಕರ್ತವ್ಯ ಎಂದು ಕತಿಹಾರ್ ಸಿವಿಲ್ ಸರ್ಜನ್ ಎಸ್‍ಸಿ ಝಾ ಪ್ರತಿಕ್ರಿಯಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin