ಆಗಸ್ಟ್ ಮೊದಲ ವಾರದಲ್ಲಿ ಕೇಂದ್ರ ಸಂಪುಟ ವಿಸ್ತರಣೆ, ಜೆಡಿಯು-ಎಐಎಡಿಎಂಕೆ ಸೇರ್ಪಡೆ

Modi-1

ನವದೆಹಲಿ, ಜು.31-ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಸ್ಟ್ ತಿಂಗಳ ಮೊದಲ ವಾರ ನಡೆಯಲಿದ್ದು, ಈ ಬಾರಿ ಎನ್‍ಡಿಎ ಮೈತ್ರಿ ಕೂಟಕ್ಕೆ ಜೆಡಿಯು ಮತ್ತು ಎಐಎಡಿಎಂಕೆ ಸೇರ್ಪಡೆಯಾಗಲಿವೆ. ಆ.8ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಇಲ್ಲವೇ ತದನಂತರ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದು, ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ. ಜತೆಗೆ ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಕೆಲವು ಸಚಿವ ಖಾತೆಗಳನ್ನು ಅದಲು ಬದಲು ಮಾಡಲಿದ್ದು, ಕಳಪೆ ಸಾಧನೆ ಮಾಡಿರುವ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡುವ ಸಂಭವವಿದೆ.

ರಕ್ಷಣಾ ಖಾತೆ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿ ಆದ ಮೇಲೆ ಈ ಖಾತೆ ಹೊಣೆಗಾರಿಕೆ ಜೇಟ್ಲಿ ಹೆಗಲ ಮೇಲಿದೆ. ಒಂದೆಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಪಾಕ್ ಉಗ್ರರ ಉಪಟಳ, ಗಡಿಯಲ್ಲಿ ಸೇನಾ ಶಿಬಿರಗಳ ಮೇಲೆ ನಡೆಯುತ್ತಿರುವ ದಾಳಿ, ಚೀನಾ-ಭಾರತ ನಡುವೆ ಮಿಜೋರಾಮ್‍ನಲ್ಲಿ ಉಂಟಾಗಿರುವ ಗಡಿ ಉದ್ವಿಗ್ನತೆಯಿಂದಾಗಿ ರಕ್ಷಣಾ ಖಾತೆಗೆ ಪೂರ್ಣಾವಧಿ ಸಚಿವರು ಬೇಕೆಂಬ ಕೂಗು ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಮೋದಿ ಕೂಡ ಸಂಪುಟ ವಿಸ್ತರಣೆಗೆ ಒಲವು ತೋರಿದ್ದು, ಅಂತ್ಯಂತ ಮಹತ್ವದ ಜವಾಬ್ದಾರಿಯಾಗಿರುವ ರಕ್ಷಣಾ ಖಾತೆಯನ್ನು ಯಾರ ಹೆಗಲಿಗೆ ನೀಡಬೇಕಂಬುದರ ಬಗ್ಗೆ ಹಿರಿಯ ಸಚಿವರಿಂದ ಸಲಹೆ ಪಡೆದಿದ್ದಾರೆ.

ನಾಲ್ಕು ದಿನಗಳ ಹಿಂದೆಯಷ್ಟೇ ಎನ್‍ಡಿಎ ಮೈತ್ರಿಕೂಟಕ್ಕೆ ಜೆಡಿಯುಗೂ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ, ಹಾಗೊಂದು ವೇಳೆ ನಡದದ್ದೇ ಆದರೆ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಮುಖಂಡ ಶರತ್‍ಯಾದವ್‍ಗೆ ರಕ್ಷಣಾ ಖಾತೆ ಸಿಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ.
ಆದರೆ, ಎನ್‍ಡಿಎ ಮೈತ್ರಿ ಕೂಟಕ್ಕೆ ಸೇರ್ಪಡೆಗೊಂಡಿರುವ ಮುಖ್ಯಮಂತ್ರಿ ನಿತೀಶ್‍ಕುಮಾರ್ ನಿರ್ಧಾರಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತ ಟಾರ್ಗೆಟ್:

ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ 50ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಹೋಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಅವರು, ತಮಿಳುನಾಡಿನತ್ತ ಗಮನ ಹರಿಸಿದ್ದಾರೆ. ಈ ಹಿಂದೆ ವಾಜಪೇಯಿ ಸಂಪುಟದಲ್ಲಿ ಎನ್‍ಡಿಎ ಮೈತ್ರಿ ಭಾಗವಾಗಿದ್ದ ಎಐಎಡಿಎಂಕೆ ಹಲವು ಕಾರಣಗಳಿಂದ ದೂರ ಸರಿದಿತ್ತು. ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಹಲವು ಕಾರಣಗಳಿಂದ ಕೇಂದ್ರದ ಜತೆ ಮುನಿಸಿಕೊಂಡು ಹೊರ ಬಂದಿದ್ದರು.

ಇದೀಗ ಆಡಳಿತಾರೂಢ ಎಐಎಡಿಎಂಕೆಯಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಮಾಜಿ ಸಿಎಂ ಪನ್ವೀರ್‍ಸ್ವಾಮಿ ನಡುವೆ ಬಣಗಳು ಉಂಟಾಗಿ ಪಕ್ಷ ಹಿಬ್ಬಾಗದತ್ತ ಸರಿದಿದೆ. ಈ ಅವಕಾಶವನ್ನೇ ಬಳಸಿಕೊಂಡಿರುವ ಅಮಿತ್‍ಶಾ ಎಐಎಡಿಎಂಕೆಯನ್ನು ಎನ್‍ಡಿಎ ತೆಕ್ಕೆಗೆ ಸೆಳೆಯಲು ಮುಂದಾಗಿದ್ದಾಗಿದ್ದಾರೆ. ಇದಕ್ಕೆ ಪಳನಿಸ್ವಾಮಿ ಕೂಡ ಅಸ್ತು ಎಂದಿದ್ದಾರೆ.   ಹೀಗಾಗಿ ಆಗಸ್ಟ್ ಮೊದಲ ವಾರದ ನಂತರ ಸಂಪುಟ ವಿಸ್ತರಣೆಯಾಗಲಿದ್ದು, ಹಲವರಿಗೆ ಸಿಹಿ, ಉಳಿದವರಿಗೆ ಕಹಿ ಆಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin