ಆಟೋರಿಕ್ಷಾ ಚಾಲಕರು ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿ

Spread the love

12

ಶಿರಸಿ,ಮಾ,15- ನಗರದಲ್ಲಿರುವ ಆಟೋರಿಕ್ಷಾ ಚಾಲಕರು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಆರೋಗ್ಯವನ್ನು ಸಹ ಸರಿಯಾಗಿಟ್ಟುಕೊಂಡು ಸರಿಯಾದ ವೇಳೆಗೆ ಅವರನ್ನು ಸುರಕ್ಷಿತವಾಗಿ ತಲುಪಿಸಿ ನಾಗರೀಕ ಮೌಲ್ಯ  ಎತ್ತಿ ಹಿಡಿಯಬೇಕು ಎಂದು ಉದ್ಯಮಿ ಉಪೇಂದ್ರ ಪೈ ಕರೆ ನೀಡಿದರು.ಮಾಹಿತಿ ಪಲಕ ಬಿಡುಗಡೆಗೊಳಿಸಿ ಎಲ್ಲಾ ಆಟೋರಿಕ್ಷಾಗಳಿಗೂ ಸಹಾಯಾರ್ಥವಾಗಿ ನೀಡಿದ ನಂತರ ಅವರು ಮಾತನಾಡಿದರು. ಉಕ ಜಿಲ್ಲಾದಿಕಾರಿಗಳ ಆದೇಶದಂತೆ ಜಿಲ್ಲೆಯ ಎಲ್ಲಾ ಆಟೋರಿಕ್ಷಾಗಳಿಗೆ ಅದರ ಮಾಲೀಕರ ಮತ್ತು ಚಾಲಕರ ಸಂಪೂರ್ಣ ಮಾಹಿತಿಯನ್ನೊಳಗೊಂಡ ಪಲಕವನ್ನು ಇನ್ನು ಮುಂದೆ ಕಡ್ಡಾಯವಾಗಿ ಆಟೋರಿಕ್ಷಾದ ಒಳಗೂ ಮತ್ತು ಹೊರಗು ಅಳವಡಿಸಬೇಕೆಂದು ಆರ್‍ಟಿಒ ಸಿ.ಡಿ. ನಾಯಕ್ ಈ ಸಂದರ್ಭದಲ್ಲಿ ಹೇಳಿದರು.

ಯಾರೋ ಒಬ್ಬರು ಮಾಡುವ ತಪ್ಪಿನಿಂದಾಗಿ ಇಡೀ ಆಟೋರಿಕ್ಷಾ ಚಾಲಕರಿಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಎಲ್ಲರೂ ನಿಷ್ಟೆಯಿಂದ ಸೇವಾ ಮನೋಬಾವನೆಯಿಂದ ಕರ್ತವ್ಯ ಮಾಡಿರಿ ಹಾಗು ದರವನ್ನು ದೂರಕ್ಕೆ ತಕ್ಕಷ್ಟು ತೆಗೆದುಕೊಳ್ಳಿರಿ ಎಂದು ಹೇಳಿದರು.ಆಟೋರಿಕ್ಷಾ ಚಾಲಕ ಪರವಾನಿಗೆಗೆ ಸರ್ಕಾರವು ನಿರ್ದಿಷ್ಟ ಪಡಿಸಿದ ಎಂಟನೆ ತರಗತಿಯನ್ನು ತೆಗೆಯಬೇಕು, ಏಕೆಂದರೆ ಆಟೋಚಾಲಕರಾಗಲು ಬರುವವರೆಲ್ಲರೂ ಅತೀ ಕಡು ಬಡವರಾಗಿರುವುದರಿಂದ ಅವರಿಗೆ ಅಷ್ಟು ವಿದ್ಯಾರ್ಹತೆ ಇರುವುದಿಲ್ಲ, ನಮ್ಮನ್ನಾಳುವ ರಾಜಕಾರಿಣಿಗಳಿಗೆ ಯಾವುದೆ ವಿದ್ಯಾರ್ಹತೆ ಇಲ್ಲಾ, ಅದಕ್ಕಾಗಿ ಅಧಿಕಾರಿಗಳು ಇದನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಆಟೋರಿಕ್ಷಾ ಕ್ಷೇಮಾಬಿವೃದ್ದಿ ಸಂಘದ ಅದ್ಯಕ್ಷ ವಿಶ್ವನಾಥ ಗೌಡ ಚಿಪಗಿ ಇವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಪೋಲಿಸ್ ಅಧಿಕಾರಿಗಳು ಬಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin