ಆತ್ಮಹತ್ಯೆಗೆ ಯತ್ನಿಸಿದ ಸಹೋದರಿಯರಿಬ್ಬರನ್ನು ದತ್ತು ಪಡೆದ ಪೊಲೀಸ್ ಇಲಾಖೆ

rAPE-00

ತುಮಕೂರು, ಏ.2- ಬಡತನದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿಯರಿಬ್ಬರನ್ನು ಸ್ಥಳೀಯರು ಪೊಲೀಸರ ಸಹಾಯದಿಂದ ರಕ್ಷಿಸಿದ್ದಾರೆ. ಈ ಇಬ್ಬರು ಬಾಲಕಿಯರನ್ನು ಪೊಲೀಸ್ ಇಲಾಖೆಯು ದತ್ತು ಪಡೆದಿದೆ. ಇಂದು ಬೆಳಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ತೀವ್ರ ಬಡತನದಲ್ಲಿದ್ದ ಸಹೋದರಿಯರು ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿಸಿದರು. ಶಿರಾ ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ನೀಲಾ (14) ಮತ್ತು ರಾಧಾ (10) ಎಂಬ ಸಹೋದರಿಯರು ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿದ್ದ ಈ ಸಹೋದರಿಯರು ಬೇರೆಯವರ ಮನೆಯಲ್ಲಿ ಇದ್ದು, ವ್ಯಾಸಂಗ ಮಾಡುತ್ತಿದ್ದರು. ನೀಲಾ 6ನೆ ತರಗತಿ ಮತ್ತು ರಾಧಾ 4ನೆ ತರಗತಿ ಓದುತ್ತಿದ್ದರು. ಮುಂದಿನ ವ್ಯಾಸಂಗಕ್ಕೆ ಅನುಕೂಲವಿಲ್ಲದ್ದರಿಂದ ಅವರು ಕಳೆದ 15 ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಸ್ಥಳೀಯರು ಹಾಗೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದ್ದರು.  ಗುಣಮುಖರಾಗಿರುವ ಅವರನ್ನು ಈಗ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ದತ್ತು ಪಡೆದು ಅವರ ಭವಿಷ್ಯದ ಬದುಕಿಗೆ ವ್ಯವಸ್ಥೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin