ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನಿಗೆ ಕೇಜ್ರೀವಾಲ್‍ರಿಂದ 1 ಕೋಟಿ ರೂ. ಪರಿಹಾರ

Spread the love

Kejriwal-001
ನವದೆಹಲಿ, ನ.3- ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಸೈನಿಕ ರಾಮ್‍ಕಿಶನ್ ಗ್ರೆವಾಲ್ (70) ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 1 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದಾರೆ.ಒಆರ್‍ಒಪಿ ಜಾರಿ ವಿಳಂಬದಿಂದ ಬೇಸತ್ತು ಅವರು ಸಾವಿಗೆ ಶರಣಾಗಿದ್ದರು.ಗ್ರೆವಾಲ್ ಕುಟುಂಬದವರ ಭೇಟಿ ಮಾಡಲು ಹೋಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಮತ್ತು ಕೇಜ್ರಿವಾಲ್‍ರನ್ನು ನಿನ್ನೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.ಮಾಜಿ ಸೈನಿಕನ ಆತ್ಮಹತ್ಯೆ ಪ್ರಕರಣವು ವಿವಾದಕ್ಕೆ ಕಾರಣವಾಗಿದ್ದು ವಿರೋಧ ಪಕ್ಷಗಳು ಮತ್ತು ಸರ್ಕಾರದ ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪಗಳ ಕೆಸರೆರಚಾಟಕ್ಕೆ ಕಾರಣವಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin