ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನೇಣು ಕುಣಿಕೆ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡ ಟೆಕ್ಕಿ..?
ಪುಣೆ, ಫೆ.4- ಇತ್ತೀಚೆಗಷ್ಟೆ ಪುಣೆಯ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಕೇರಳ ಮೂಲದ ರಾಸಿಲಾ ಎಂಬ ಉದ್ಯೋಗಿ ಕೊಲೆಯ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಟೆಕ್ಕಿ ಬಲಿಯಾಗಿರುವ ಘಟನೆ ಎಲ್ಲರನ್ನೂ ತಲ್ಲಣಗೊಳಿಸಿದೆ. ಟಾಟಾ ಕನ್ಸಲ್ಟೆಂಟೀಸ್ ಸರ್ವೀಸ್ (ಟಿಸಿಎಸ್) ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಕಾನ್ಪುರ ಮೂಲದ ಅಭಿಷೇಕ್ಕುಮಾರ್ ಎಂಬಾತ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಆತ್ಮಹತ್ಯೆಗೂ ಮುನ್ನ ಹಗ್ಗವನ್ನು ಫ್ಯಾನ್ಗೆ ಕಟ್ಟಿ ಕುಣಿಕೆ ಹಾಕಿದ ನಂತರ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಈತ ಫೋಟೋವನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದಾನೆ.
ಇದರಿಂದ ಗಾಬರಿಯಾದ ಆತನ ಸ್ನೇಹಿತ ಇತರರನ್ನು ಒಗ್ಗೂಡಿಸಿಕೊಂಡು ಬಂದು ನೋಡುವಷ್ಟರಲ್ಲಿ ಅಭಿಷೇಕ್ ಸಾವಿಗೆ ಶರಣಾಗಿದ್ದಾನೆ. ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ನೀಡಿರುವ ವರದಿ ಪ್ರಕಾರ, ಪ್ರೇಮ ವೈಫಲ್ಯವೇ ಅಭಿಷೇಕ್ ಸಾವಿಗೆ ಕಾರಣ ಎನ್ನಲಾಗಿದೆ. ಪುಣೆಯಲ್ಲಿ ಮೇಲಿನಿಂದ ಮೇಲೆ ಸಾಫ್ಟ್ವೇರ್ ಎಂಜಿನಿಯರ್ಗಳು ಬಲಿಯಾಗುತ್ತಿರುವುದು ಇಲ್ಲಿನ ಸಾಫ್ಟ್ವೇರ್ ವಲಯದಲ್ಲಿ ಅಭದ್ರತೆ ಭೀತಿ ಸೃಷ್ಟಿಸಿದೆ. ಡಿಸೆಂಬರ್ನಲ್ಲಿ ಐಟಿ ಕ್ಯಾಂಪಸ್ನಲ್ಲಿ ಮಹಿಳಾ ಟೆಕ್ಕಿ ಹತ್ಯೆಯಾಗಿತ್ತು. ಇತ್ತೀಚೆಗಷ್ಟೆ ಇನ್ಫೋಸಿಸ್ ಕಚೇರಿಯಲ್ಲಿ ಮಹಿಳಾ ಟೆಕ್ಕಿ ಕೊಲೆಯಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >