ಆಧಾರ್ ನಂಬರ್ ದುರುಪಯೋಗ
ಕೆಜಿಎಫ್, ನ.23- ಅಕ್ರಮವೆಸಗಿದ ಸೈಬರ್ ಕೇಂದ್ರದ ವಿರುದ್ಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಸೈಬರ್ ಕೇಂದ್ರದ ಮಾಲೀಕರ ವಿರುದ್ಧ ಆಂಡರಸನ್ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.ಆಂಡರಸನ್ಪೇಟೆಯ ಎಸ್ಎಸ್ಸೈಬರ್ ಕೇಂದ್ರದ ಹಮ್ಮಿನಿದ್ದಿನ್ ಷರೀಫ್ ಮತ್ತು ಹಮ್ಮಿನುದ್ದಿನ್ ಆರೋಪಿಗಳು.ಆರೋಪಿಗಳು ಪಡಿತರ ಕೂಪನ್ ವಿತರಣೆ ಮಾಡುವಾಗ ಒಂದೇ ಆಧಾರ ನಂಬರಿನಲ್ಲಿ ಹಲವಾರು ಕೂಪನ್ಗಳನ್ನು ವಿತರಣೆ ಮಾಡಿ ಅಕ್ರಮವೆಸಗಿದ್ದರು ಎಂದು ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸ್ ತನಿಖೆ ಮುಂದುವರೆದಿದೆ.