ಆಫ್ಘಾನಸ್ತಾನದಲ್ಲಿ ಮುಂದುವರಿದ ಉಗ್ರರ ದಾಳಿ, 10 ಯೋಧರ ಬಲಿ
ಕಾಬೂಲ್, ಮೇ 24- ಆಫ್ಘಾನಸ್ತಾನದಲ್ಲಿ ತಾಲಿಬಾನ್ ಉಗ್ರರ ಹಿಂಸಾಕೃತ್ಯಗಳು ಮುಂದುವರಿದಿದೆ. ದಕ್ಷಿಣ ರಾಜ್ಯ ಕಂದಹಾರ್ನಲ್ಲಿ ಸೇನಾ ನೆಲೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 10ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಶಾ ವಾಲಿ ಕೋಟ್ ಜಿಲ್ಲೆಯ ಅಜಕ್ಜಾಯಿಯಲ್ಲಿರುವ ಮಿಲಿಟರಿ ಕಾಪ್ರ್ಸ್ 205 ಶಿಬಿರದ ಮೇಲೆ ತಡರಾತ್ರಿ ಉಗ್ರರಿಂದ ಈ ದಾಳಿ ನಡೆದಿದೆ. ಝಬುಲ್ ಪ್ರಾಂತ್ಯದಲ್ಲಿರುವ ಪೊಲೀಸ್ ಹೊರಠಾಣೆಗಳ ಮೇಲೆ ತಾಲಿಬಾಲ್ ಬಂಡುಕೋರರು ಆಕ್ರಮಣ ನಡೆಸಿ 21 ಪೊಲೀಸರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಮತ್ತೊಂದು ಹತ್ಯಾಕಾಂಡ ನಡೆದಿದೆ ಎಂದು ಅಘ್ಫಾನಿಸ್ತಾನ ರಕ್ಷಣಾ ಸಚಿವಾಲಯ ತಿಳಿಸಿದೆ.
ಆಫ್ಫನ್ನಲ್ಲಿ ದಾಳಿಗಳನ್ನು ತೀವ್ರಗೊಳಿಸಿ ಹೊಸ ಆಡಳಿತ ಸ್ಥಾಪಿಸುವುದಾಗಿ ತಾಲಿಬಾನ್ ನಾಯಕರು ಘೋಷಿಸಿದ ನಂತರ ಯೋಧರು ಮತ್ತು ಪೆÇಲೀಸರ ನರಮೇದ ಮುಂದುವರಿದಿದ್ದು ಆತಂಕ ಸೃಷ್ಟಿಯಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >