ಆಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಅಲ್ಖೈದಾ ನಾಯಕ ಬಲಿ
ವಾಷಿಂಗ್ಟನ್, ಮಾ.26-ಪಾಕಿಸ್ತಾನದಲ್ಲಿ ಹಲವಾರು ಭಯಾನಕ ಆಕ್ರಮಣಗಳನ್ನು ನಡೆಸಿ ಹಲವಾರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದ ಅಲ್ ಖೈದಾ ಉಗ್ರಗಾಮಿ ಸಂಘಟನೆಯ ನಾಯಕ ಕಾರಿ ಯಾಸಿನ್ ಪೂರ್ವ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾ ಪಡೆ ನಡೆಸಿದ ಡ್ರೋಣ್ ದಾಳಿಯಲ್ಲಿ ಹತನಾಗಿದ್ದಾನೆ.
ಇಸ್ಲಾಮಾಬಾದ್ನ ಮಾರಿಯಾಟ್ ಹೊಟೇಲ್ನಲ್ಲಿ ಸೆಪ್ಟೆಂಬರ್ 20, 2008ರಲ್ಲಿ ನಡೆದ ಬಾಂಬ್ ದಾಳಿ ಹಾಗೂ ಲಾಹೋರ್ನಲ್ಲಿ 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಕರೆದೊಯ್ಯತ್ತಿದ್ದ ಬಸ್ ಮೇಲೆ ನಡೆದ ದಾಳಿಗೆ ಈತ ಕಾರಣನಾಗಿದ್ದ ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಅಫ್ಘಾನಿಸ್ತಾನದ ಪಕ್ಟೀಕಾ ಪ್ರಾಂತ್ಯದಲ್ಲಿ ಮಾರ್ಚ್ 19ರಂದು ನಡೆದ ಡ್ರೋಣ್ ದಾಳಿಯಲ್ಲಿ ಕಾರಿ ಯಾಸಿನ್ ಬಲಿಯಾಗಿದ್ದಾನೆ ಎಂದು ಅಮೆರಿಕ ರಕ್ಷಣಾ ಸಚಿವ ಜಿಮ್ ಮಟ್ಟಿಸ್ ತಿಳಿಸಿದ್ದಾರೆ. ಕಾರಿ ಯಾಸಿನ್ ಸಾವಿನಿಂದ ಇಸ್ಲಾಮ್ ಧರ್ಮಕ್ಕೆ ಕಳಂಕ ತರುವ ಮತ್ತು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಭಯೋತ್ಪಾದಕರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS