ಆಫ್ಘಾನಿಸ್ತಾನದಲ್ಲಿ ಡ್ರೋಣ್ ದಾಳಿಗೆ ಕಾಸರಗೋಡು ಐಎಸ್ ಉಗ್ರ ಬಲಿ

ISIS-Militants--01

ಕಾಸರಗೋಡು, ಏ.14-ಕರಾವಳಿ ರಾಜ್ಯ ಕೇರಳದಿಂದ ಕಣ್ಮರೆಯಾಗಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆಗೆ ಸೇರಿದ ಕಾಸರಗೋಡು ಜಿಲ್ಲೆಯ ಯುವಕನೊಬ್ಬ ಆಫ್ಘಾನಿಸ್ತಾನದಲ್ಲಿ ನಡೆದ ಡ್ರೋಣ್ ದಾಳಿಯಲ್ಲಿ ಹತನಾಗಿದ್ದಾನೆ. ಆಫ್ಘಾನಿಸ್ತಾನದ ನಗರ್‍ಹಾರ್ ಪ್ರಾಂತ್ಯದಲ್ಲಿ ನಡೆದ ಡ್ರೋಣ್ ವಾಯು ದಾಳಿಯಲ್ಲಿ ಈ ಜಿಲ್ಲೆಯ ಪಡ್ನಾ ನಿವಾಸಿ ಮುರ್ಷಿದ್ ಮಹಮದ್ ಬಲಿಯಾಗಿದ್ದಾನೆ. ಪಡ್ನಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಾಯಕ ಅಬ್ದುರ್ ರೆಹಮಾನ್ ಖಚಿತಪಡಿಸಿದ್ದಾರೆ.

ತಮಗೆ ನಿನ್ನೆ ರಾತ್ರಿ ಸಾಮಾಜಿಕ ಜಾಲತಾಣ ಮತ್ತು ಟೆಲಿಗ್ರಾಂ ಮೂಲಕ ಈ ಸಂದೇಶ ತಲುಪಿರುವುದಾಗಿ ಅವರು ಹೇಳಿದ್ದಾರೆ. ಕಳೆದ ವರ್ಷ ಮಧ್ಯಪ್ರಾಚ್ಯಕ್ಕೆ ತೆರಳಿ ನಾಪತ್ತೆಯಾದ 21 ಮಂದಿಯಲ್ಲಿ ಮುರ್ಷಿದ್ ಕೂಡ ಒಬ್ಬನಾಗಿದ್ದು, ಈತ ಐಎಸ್ ಉಗ್ರಗಾಮಿ ಸಂಘಟನೆಯನ್ನು ಸೇರಿದ್ದಾನೆ ಎಂದು ತಿಳಿದುಬಂದಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin