ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ದಾಳಿಗೆ ಹಲವರ ಬಲಿ

Afganistan--01

ಕಾಬೂಲ್, ಮಾ.2- ಆಫ್ಘಾನಿಸ್ತಾನದಲ್ಲಿ ತಾಲಿಬಾಲ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ರಾಜಧಾನಿ ಕಾಬೂಲ್‍ನ ಪೊಲೀಸ್, ಸೇನೆ ಮತ್ತು ಗುಪ್ತಚರ ಇಲಾಖೆಗಳನ್ನು ಗುರಿಯಾಗಿಟ್ಟುಕೊಂಡು ಬಂಡುಕೋರರು ನಡೆಸಿದ ದಾಳಿಯಲ್ಲಿ ಹಲವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಕಾಬೂಲ್‍ನ ಪಶ್ಚಿಮ ಭಾಗದಲ್ಲಿ ತಾಲಿಬಾನಿಗಳಿಂದ ಸರಣಿ ದಾಳಿಗಳು ನಡೆದಿರುವುದನ್ನು ಸೇನಾಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.  ಮಿಲಿಟರಿ ತರಬೇತಿ ಶಾಲೆ ಸಮೀಪ ಪೊಲೀಸ್ ಕೇಂದ್ರ ಕಚೇರಿ ಬಳಿ ಬಾಂಬ್‍ಗಳನ್ನು ಉಗ್ರರು ಸ್ಫೋಟಿಸಿದರು. ಅದಾದ ಬಳಿಕ ಪೊಲೀಸರು- ಯೋಧರು ಮತ್ತು ಬಂಡುಕೋರರ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು. ಈ ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ಹೇಳಿರುವ ಅಧಿಕಾರಿ, ಸಾವು-ನೋವಿನ ನಿಖರ ಸಂಖ್ಯೆ ತಿಳಿಸಲು ನಿರಾಕರಿಸಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin