ಆರೋಗ್ಯಯುತ ಯುವ ಜನಾಂಗ ರಾಷ್ಟ್ರದ ಅಮೂಲ್ಯ ಸಂಪತ್ತು
ರಾಮದುರ್ಗ,ಅ.5- ಇಂದಿನ ಯುವ ಜನಾಂಗಕ್ಕೆ ಬಾಲ್ಯದಿಂದಲೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ರಾಷ್ಟ್ರ ಪ್ರಜ್ಞೆ , ಧರ್ಮ ಪ್ರಜ್ಞೆ ಮತ್ತು ಸಮಯ ಪ್ರಜ್ಞೆ ಬೆಳೆಸಿದರೆ ಮುಂದೆ ಉತ್ತಮ ಸಂಸ್ಕಾರ ಉಳ್ಳ ಪ್ರಜೆಗಳಾಗಿ ಬೆಳೆದು, ಆರೋಗ್ಯಯುತ ಯುವ ಜನಾಂಗ ರಾಷ್ಟ್ರದ ಅಮೂಲ್ಯ ಸಂಪತ್ತು ಎಂದು ಮಾಜಿ ಸಚಿವ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಹೇಳಿದರು.ತಾಲೂಕಿನ ಗೊಡಚಿಯಲ್ಲಿ ನಡೆದ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಶ್ರೀ ರಂಭಾಪುರಿ ಜಗದ್ಗುರುಗಳನ್ನು ಕಾಣಲು ಬಂದಿದ್ದು ಶ್ರೀ ರಂಭಾಪುರಿ ಪೀಠಕ್ಕೆ ಬರುವ ಕ್ಷೇತ್ರ ತಾವು ಶಾಸಕನಾಗಿರುವುದು ತಮ್ಮ ಸೌಭಾಗ್ಯ, ಶ್ರೀ ರಂಭಾಪುರಿ ಪೀಠಕ್ಕೆ ಕೇವಲ ವೀರಶೈವರು ಮಾತ್ರ ಭಕ್ತರಲ್ಲ. ಜತಿ ಮತ ಪಂಥ ಮೀರಿ ಎಲ್ಲ ಜನಾಂಗದ ಜನರು ಈ ಕ್ಷೇತ್ರದ ಭಕ್ತರಾಗಿದ್ದಾರೆ ಎಂದು ತಿಳಿಸಿದರು.
ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಚಿವ ಮತ್ತು ಶಾಸಕ ಸಿ.ಟಿ. ರವಿ, ಬಸವರಾಜ ಬೊಮ್ಮಾಯಿ, ಗೊಡಚಿ ಕ್ಷೇತ್ರದ ಸಂಗ್ರಾಮಸಿಂಹ ಸಿಂಧೆ ಮಹಾ ರಾಜರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಹಾಂತೇಶ ಬೀಳಗಿ ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಹಿರೇಮುಗದೂರಿನ ವಯೋವೃದ್ಧ ಜ್ಞಾನ ವೃದ್ಧರಾದ ಚಂದ್ರಶೇಖರಪ್ಪ ಕನವಳ್ಳಿ ಅವರು ಆಹಾರ-ಆರೋಗ್ಯ ಮತ್ತು ಅಧ್ಯಾತ್ಮ ವಿಚಾರವಾಗಿ ಉಪನ್ಯಾಸ ನೀಡಿದರು. ದೊಡ್ಡವಾಡದ ಜಡಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನಾಂದಿ ನುಡಿಯಲ್ಲಿ ಪ್ರತಿಯೊಬ್ಬರಿಗೂ ಧರ್ಮವಿದೆ. ಸನ್ಮಾರ್ಗದಲ್ಲಿ ಬಾಳಿದರೆ ಬಾಳು ಸುಂದರಗೊಳ್ಳುತ್ತವೆ ಎಂದು ತಿಳಿಸಿದರು. ಮೈಸೂರು ಡಾ| ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಬಾಳೇಹೊನ್ನೂರ ಗುರುಕುಲದ ಶ್ರೀ ಜಗದ್ಗುರು ರೇಣುಕಾಚಾರ್ಯ ವೇದಘೋಷ ನೇರವೇರಿಕೊಟ್ಟರು. ಪಟ್ಟಣದ ರಾಜೇಶ ಬೀಳಗಿ ಅವರಿಗೆ ರಂಭಾಪುರಿ ಯುವಸಿರಿ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿರು.
ಮುನವಳ್ಳಿ ಸೋಮಶೇಖರಮಠದ ಮ.ನಿ.ಪ್ರ. ಮುರುಗೇಂದ್ರ ಸ್ವಾಮಿಗಳು, ನರಸಾಪುರ ಹಿರೇಮಠದ ಮರುಳಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ದಾಸೋಹ ದಾನಿಗಳಾದ ವಿವೇಕರಾವ ಪಾಟೀಲ ಎಮ್.ಎಲ್.ಸಿ ಬೆಳಗಾವಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಸ್ಥಾಪಕ ಅಧ್ಯಕ್ಷ ಆನಂದ ಅಪ್ಪುಗೋಳ, ಗೊಡಚಿಯ ಈರಣ್ಣ ಕಾಮಣ್ಣವರ, ದುಂಡಪ್ಪ ಕಡಗದ ಮಲ್ಲಪ್ಪ ಜಮದಾರ, ವಿಶ್ವನಾಥ ಕಟ್ಟಿ, ಜಿ. ಜಿ. ಪಾಟೀಲ ಚುಂಚನೂರು, ಬಿ. ಎಂ. ತುಪ್ಪದ, ಗಿರೀಶ ನ್ಯಾಮಗೌಡರ, ಪಂಚನಗೌಡ ಬ. ದ್ಯಾಮನಗೌಡ್ರ, ಚಂದ್ರಶೇಖರ ಅಷ್ಟಗಿಮಠ ಬೈಲಹೊಂಗಲ ಸೇರಿದಂತೆ ಹಲವಾರು ಮಠಾಧೀಶರಿಗೆ ಮತ್ತು ದಾನಿಗಳಿಗೆ ಗುರುರಕ್ಷೆಯಿತ್ತು ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಗದುಗಿನ ವೀರೇಶ ಕಿತ್ತೂರ ಅವರ ಸಂಗೀತಕ್ಕೆ ಸುರೇಶ ಬೆನಕಟ್ಟಿ ತಬಲಾ ಸಾಥ ನೀಡಿದರು. ತೋರನಗಟ್ಟಿ ಎಸ್.ಎಂ. ಐನಾಪುರ, ಶಿವಮೊಗ್ಗದ ಶಾಂತಾ ಆನಂದ ಮುಂತಾದವರಿದ್ದರು.
► Follow us on – Facebook / Twitter / Google+