ಆರೋಗ್ಯ ದೃಷ್ಟಿಯಿಂದ ಶುದ್ಧ ನೀರು ಪೂರೈಕೆ ಮಾಡಿ

kr--pete-2

ಕೆ.ಆರ್.ಪೇಟೆ,ಅ.6- ಸಮಾಜದ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವುದು ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣ ಹೊಸ ಕಿಕ್ಕೇರಿ ರಸ್ತೆಯಲ್ಲಿರುವ ಗವಿಯಮ್ಮ-ಬೋರಲಿಂಗೇಗೌಡ ಸಮುದಾಯ ಭವನದ ಆವರಣದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಮತ್ತು ಉದ್ಯಮಿ ಶ್ಯಾಂಪ್ರಸಾದ್ ಅವರು ನೂತನವಾಗಿ ಆರಂಭಿಸಿರುವ 5 ರೂ.ಗೆ 20 ಲೀಟರ್ ನೀರು ಪೂರೈಕೆ ಮಾಡುವ ಕೆಜೆಬಿ ಜಲ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನಿಗೆ ಅಶುದ್ದ ಕುಡಿಯುವ ನೀರಿನಿಂದ ಅನೇಕ ರೋಗ-ರುಜಿನಗಳು ಹರಡುತ್ತಿವೆ ಇದನ್ನು ಹೋಗಲಾಡಿಸಲು ಶುದ್ದ ಕುಡಿಯುವ ನೀರಿನ ಅಗತ್ಯತೆ ಇದೆ ಇದನ್ನು ಪಟ್ಟಣದ ಜನತೆಗೆ ಕೇವಲ 5 ರೂ.ಗೆ 20 ಲೀಟರ್ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಘಟಕ ಆರಂಭಿಸಿರುವ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಮತ್ತು ಉದ್ಯಮಿ ಶ್ಯಾಂಪ್ರಸಾದ್ ಅವರ ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.ಪುರಸಭೆಯ ಅಧ್ಯಕ್ಷ ಅಶೋಕ್, ಸದಸ್ಯರಾದ ಕೆ.ಟಿ.ಚಕ್ರಪಾಣಿ, ಉದ್ಯಮಿ ಶ್ಯಾಂಪ್ರಸಾದ್ ಮತ್ತಿತರರು ಇದ್ದರು.

 

► Follow us on –  Facebook / Twitter  / Google+

Sri Raghav

Admin