ಆರೋಗ್ಯ ಸಚಿವರನ್ನು ಭೇಟಿ ಮಾಡಿದ ಲೀಲಾವತಿ-ವಿನೋದ್

lilavati

ಬೆಂಗಳೂರು,ಏ.25- ಸೋಲನದೇವನಹಳ್ಳಿ ಯಲ್ಲಿರುವ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು ಹಾಗೂ ಆಸ್ಪತ್ರೆಗೆ ಪ್ರತಿದಿನ ವೈದ್ಯರು ಬಂದು ಕರ್ತವ್ಯ ನಿರ್ವಹಿಸುವಂತೆ ತಾವು ಸೂಚನೆ ನೀಡ ಬೇಕೆಂದು ಹಿರಿಯ ನಟಿ ಲೀಲಾವತಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮಗ ವಿನೋದ್‍ರಾಜ್ ಅವರೊಂದಿಗೆ ಸಚಿವರನ್ನು ಭೇಟಿ ಮಾಡಿದ ಲೀಲಾವತಿ ಅವರು, ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿ ಚಿಕ್ಕ ಆಸ್ಪತ್ರೆಯನ್ನು ಕಟ್ಟಿದ್ದೇವೆ.ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರೆಯುತ್ತಿತ್ತು. ಆದರೆ ಕೆಲವು ಕಾರಣಗಳಿಂದ ವೈದ್ಯರು ಗೈರಾಗುತ್ತಿದ್ದರು. ಎರಡುಮೂರು ದಿನಗಳಿಗೊಮ್ಮೆ ವೈದ್ಯರು ಬರುತ್ತಿದ್ದಾರೆ. ಇದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಸಚಿವರಲ್ಲಿ ಅಳಲು ತೋಡಿಕೊಂಡರು. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಆಧುನಿಕ ಸೌಲಭ್ಯಗಳು ಸಾಮಾನ್ಯರಿಗೆ ದೊರೆಯುವಂತೆ ಮಾಡಬೇಕು ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ ಸಣ್ಣ ಸಣ್ಣ ರೈತರನ್ನು ಒಕ್ಕಲೆಬ್ಬಿಸಬೇಡಿ, ಅವರಿಗೆ ಹಕ್ಕುಪತ್ರ ನೀಡಿ, ಅರಣ್ಯ ಭೂಮಿಗೆ ಬದಲಾಗಿ ಅವರಿಗೆ ಪರ್ಯಾಯ ಭೂಮಿ ನೀಡಿ ಬದುಕಲು ಅವಕಾಶ ಮಾಡಿಕೊಡಿ ಎಂದು ಕೋರಿದ್ದಾರೆ. ಮನವಿಯನ್ನು ಸ್ವೀಕರಿಸಿದ ಸಚಿವ ರಮೇಶ್‍ಕುಮಾರ್, ಆಸ್ಪತ್ರೆಗೆ ಸೌಲಭ್ಯ ಒದಗಿಸುವುದು, ಪ್ರತಿದಿನ ವೈದ್ಯರು ಭೇಟಿ ನೀಡಿ ಕರ್ತವ್ಯ ನಿರ್ವಹಿಸುವಂತೆ ಮಾಡುವುದು ಸೇರಿದಂತೆ ತಾವು ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸಚಿವರು ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin