ಆರ್‍ಟಿಐ ಮಾಹಿತಿ ನೀಡದ ಪೊಲೀಸ್ ಉನ್ನತಾಧಿಕಾರಿಗೆ ಶೋಕಾಸ್ ನೋಟಿಸ್, 25000 ರೂ. ದಂಡ..?

RTI-01

ಬೆಂಗಳೂರು, ಮೇ 20- ಆರ್‍ಟಿಐ(ಮಾಹಿತಿ ಹಕ್ಕು) ಕಾಯ್ದೆಯಡಿ ಮಾಹಿತಿ ನೀಡಲು ವಿಫಲರಾದ ಪೊಲೀಸ್ ವರಿಷ್ಠಾಧಿಕಾರಿ(ನೇಮಕಾತಿ ಮತ್ತು ತರಬೇತಿ) ಎ.ಜಿ.ಈಶ್ವರಪ್ಪ ಅವರಿಗೆ ಕರ್ನಾಟಕ ಮಾಹಿತಿ ಆಯೋಗ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಕರ್ತವ್ಯ ಲೋಪಕ್ಕಾಗಿ ತಮಗೆ ಏಕೆ 25000 ರೂ.ಗಳ ಗರಿಷ್ಠ ದಂಡ ಏಕೆ ವಿಧಿಸಬಾರದು ಎಂದು ನೋಟಿಸ್‍ನಲ್ಲಿ ಪ್ರಶ್ನಿಸಲಾಗಿದೆ.   ಆರ್‍ಟಿಐ ಕಾಯ್ದೆ 2005ರಡಿ ಸರ್ಕಾರಕ್ಕೆ ಸಂಬಂಧಪಟ್ಟ ಹಾಗೂ ಮಾಹಿತಿ ನೀಡಲು ಯೋಗ್ಯವಾದ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ನೇಮಕಾತಿ ವಿಷಯ ಕುರಿತಂತೆ ಕೇಳಲಾದ ವಿವರಗಳಿಗೆ ಸೂಕ್ತ ಮಾಹಿತಿ ನೀಡಲು ಈಶ್ವರಪ್ಪ ಅವರು ವಿಫಲರಾಗಿದ್ದಾರೆ ಎಂದು ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ್ ತಿಳಿಸಿದ್ದಾರೆ.ಈ ಸಂಬಂಧ ವಿಚಾರಣೆಗಾಗಿ ಫೆ.7ರಂದು ಆಯೋಗದ ಮುಂದೆ ಖುದ್ದಾಗಿ ಹಾಜರಾಗಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದರೂ ಕೂಡ ಈಶ್ವರಪ್ಪನವರು ಗೈರು ಹಾಜರಾಗಿ ನಿಯಮವನ್ನು ಉಲ್ಲಂಘಿಸಿದ್ದಾರೆ.   ಮಾಹಿತಿ ಹಕ್ಕು ಕಾಯ್ದೆ ಹಾಗೂ ಆಯೋಗದ ಸೂಚನೆಗಳನ್ನು ಉಲ್ಲಂಘಿಸಿರುವುದಕ್ಕಾಗಿ ಈಶ್ವರಪ್ಪ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ನಿಮ್ಮಿಂದ ಉದ್ದೇಶಪೂರ್ವಕ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದೆ. ಇದಕ್ಕಾಗಿ ನಿಮಗೆ 25000 ರೂ.ಗಳ ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin