ಆರ್ಬಿಐನಿಂದ ಶೀಘ್ರದಲ್ಲೇ 500 ರೂ. ಹೊಸ ನೋಟು
ಮುಂಬೈ/ನವದೆಹಲಿ, ಜೂ.13- ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 500 ರೂ.ಗಳ ಹೊಸ ಕರೆನ್ಸಿಯನ್ನು ಪರಿಚಯಿಸಲಿದೆ. ಈ ನೋಟಿಗಳು A ಎಂಬ ಅಕ್ಷರ ಹೊಂದಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.8ರಂದು 500 ಮತ್ತು 1,000 ರೂ.ಗಳ ಹಳೆ ನೋಟುಗಳನ್ನು ರದ್ದು ಮಾಡಿದ ನಂತರ ಜಾರಿಗೆ ಬಂದ ತಿಳಿ ಹಸಿರು ಬಣ್ಣದ 500 ರೂ.ಗಳ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿತ್ತು, ಈಗ ಹೊಸದಾಗಿ ಪರಿಚಯವಾಗಲಿರುವ ನೋಟು ಹಿಂದಿನ ಕರೆನ್ಸಿಗಳಂತೆ ಇರುತ್ತದೆಯಾದರೂ, ಅದು A ಅಕ್ಷರವನ್ನು ಒಳಗೊಂಡಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈಗ ಚಲಾವಣೆಯಲ್ಲಿರುವ 500 ರೂ.ಗಳ ಜೊತೆಗೆ ಹೊಸ ಶ್ರೇಣಿ ನೋಟುಗಳೂ ಕೂಡ ಚಾಲ್ತಿಯಲ್ಲಿರುತ್ತವೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments