ಆರ್.ಅಶ್ವಿನ್‍ ಐಸಿಸಿ ವರ್ಷದ ಕ್ರಿಕೆಟಿಗ

Spread the love

Ashwin-01

ದುಬೈ,ಡಿ.22- 2016ನೇ ವರ್ಷದ ನಂಬರ್ ಒನ್ ಟೆಸ್ಟ್ ಬ್ಯಾಟ್ಸ್‍ಮೆನ್ ಹಾಗೂ ಆಲ್ ರೌಂಡರ್ ಎಂಬ ಖ್ಯಾತಿಗೆ ಭಾಜನರಾಗಿರುವ ಅಶ್ವಿನ್ ಈಗ ವರ್ಷದ ಐಸಿಸಿ ಕ್ರಿಕೆಟಿಗ ಎಂಬ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತೋರಿದ ಅದ್ಭುತ ಪ್ರದರ್ಶನ ಸೇರಿದಂತೆ ಕಳೆದ ವರ್ಷ ಅವರು ಇತರೆ ತಂಡಗಳ ವಿರುದ್ಧ ನೀಡಿದ ಸಾಮಥ್ರ್ಯಗಳ ಮಾನದಂಡಗಳ ಮೇಲೆ ಅಶ್ವಿನ್ ಅವರನ್ನು ವರ್ಷದ ಐಸಿಸಿ ಕ್ರಿಕೆಟ್‍ಪಟು ಎಂಬ ಗೌರವಕ್ಕೆ ಆಯ್ಕೆ ಮಾಡಲಾಗಿದೆ.  ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತವನ್ನು ನಂಬರ್ ಒನ್ ಪಟ್ಟಕ್ಕೆ ಕೊಂಡೊಯ್ದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‍ನೊಂದಿಗೆ ಶ್ರೇಷ್ಠ ನಾಯಕ ಎಂಬ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಸಚಿನ್, ದ್ರಾವಿಡ್‍ರ ಕ್ಲಬ್ ಸೇರಿದ ಅಶ್ವಿನ್:

ಪ್ರತಿ ವರ್ಷದ 14ನೆ ಸೆಪ್ಟೆಂಬರ್‍ನಿಂದ ಬರುವ ವರ್ಷದ ಸೆಪ್ಟೆಂಬರ್ 20ರವರೆಗೆ ಕ್ರಿಕೆಟ್ ಜೀವನದಲ್ಲಿ ತೋರುವ ಶ್ರೇಷ್ಠ ಸಾಧನೆ ಆಧಾರಿತ ಮೇಲೆ ಈ ಪ್ರಶಸ್ತಿಗೆ ಪರಿಗಣನೆಯಾಗಲಿದ್ದು , ರವಿಚಂದ್ರನ್ ಅಶ್ವಿನ್ ಅವರು 2015 ಹಾಗೂ 2016ರ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ನಂಬರ್ 1 ಸ್ಥಾನವನ್ನು ಭದ್ರ ಪಡಿಸಿಕೊಂಡ ಕಾರಣದಿಂದ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ಕಳೆದ ವರ್ಷ ಅವರು ಆಡಿರುವ 8 ಟೆಸ್ಟ್ ಪಂದ್ಯಗಳಿಂದ 48 ವಿಕೆಟ್ ಹಾಗೂ 336 ರನ್ ಹಾಗೂ 19 ಟ್ವೆಂಟಿ -20 ಪಂದ್ಯಗಳಿಂದ 27 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಭಾರತದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ (2004) ಹಾಗೂ ಸಚಿನ್ ತೆಂಡೂಲ್ಕರ್( 2010)ರ ನಂತರ ಈ ಸಾಧನೆ ಮಾಡಿದ ಭಾರತದ ಮೂರನೇ ಹಾಗೂ ವಿಶ್ವದ 12ನೆ ಆಟಗಾರನಾಗಿ ಬಿಂಬಿತಗೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin