ಆರ್.ಕೆ. ನಗರ ಉಪ ಚುನಾವಣೆ : ದಿನಕರನ್ ಎಐಎಡಿಎಂಕೆ ಅಭ್ಯರ್ಥಿ

Dinaka-r

ಚೆನ್ನೈ, ಮಾ.15-ತಮಿಳುನಾಡಿನ ಆರ್.ಕೆ.ನಗರದಲ್ಲಿ ಏ.12ರಂದು ನಡೆಯುವ ಉಪ ಚುನಾವಣೆಗೆ ಎಐಎಡಿಎಂಕೆ ಉಪ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಜೈಲಿನಲ್ಲಿರುವ ವಿ.ಕೆ. ಶಶಿಕಲಾ ಅವರ ಸಹೋದರ ಟಿ.ಟಿ.ವಿ. ದಿನಕರನ್ ಅವರನ್ನು ಪಕ್ಷವು ಕಣಕಿಳಿಸಲಿದೆ. ಎಐಎಡಿಎಂಕೆ ಸಂಸದೀಯ ಮಂಡಳಿ ಸಭೆಯಲ್ಲಿ ಮಾಜಿ ಸಂಸದರೂ ಆದ ದಿನಕರನ್ ಅವರನ್ನು ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್‍ನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನಾನಂತರ ಆರ್.ಕೆ.ನಗರ ಕ್ಷೇತ್ರಕ್ಕೆ ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ನಿಗದಿಗೊಳಿಸಿತ್ತು. ಜಯಾ ಸಾವಿನ ಬಳಿಕ ಅಣ್ಣಾ ಡಿಎಂಕೆ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲು.

ಮರುತಗಣೇಶ್ ಡಿಎಂಕೆ ಅಭ್ಯರ್ಥಿ : ಇದೇ ಕ್ಷೇತ್ರದಲ್ಲಿ ಡಿಎಂಕೆ ಮರುತಗಣೇಶ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ.

[ ರಾಜ್ಯ ಬಜೆಟ್ 2017-18  (Live Updates) ]


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin