ಆಲೆಮನೆ ಮುಂದೆ ಇರಿಸಲಾಗಿದ್ದ ಕಬ್ಬಿನ ರಚ್ಚು ಭಸ್ಮ

madhuru

ಪಾಂಡವಪುರ, ಮಾ.31- ಆಲೆಮನೆ ಮುಂದೆ ಇರಿಸಲಾಗಿದ್ದ ಕಬ್ಬಿನ ರಚ್ಚಿಗೆ ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಕಬ್ಬಿನ ರಚ್ಚು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲೂಕಿನ ಕೆನ್ನಾಳು-ಹರಳಹಳ್ಳಿ ಗ್ರಾಮಗಳ ಮಧ್ಯೆ (ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ) ನಡೆದಿದೆ.ಕೆನ್ನಾಳು ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ ಕಬ್ಬಿನ ರಚ್ಚು ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದಾಗಿ ಸುಮಾರು 1.5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಚಂದ್ರಶೇಖರ್ ಅವರ ಆಲೆಮನೆಯ ಬಳಿಯಿದ್ದ ಕಬ್ಬಿನ ರಚ್ಚುಗೆ ಆಕಸ್ಮಿಕ ಬೆಂಕಿ ತಲುಗಿದೆ. ರಚ್ಚಿಗೆ ಬೆಂಕಿ ಬಿದ್ದಿರುವುದನ್ನು ಕಂಡ ಸಾರ್ವಜನಿಕರು ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ತಿಳಿಸಿದ್ದಾರೆ.

ಅಗ್ನಿ ಶಾಮಕ ದಳದ ವಾಹನಗಳು ಬರುಷ್ಟರಲ್ಲಿ ಕಬ್ಬಿನ ರಚ್ಚು ಸಂಪೂರ್ಣ ಸುಟ್ಟು ಕರಕಲಾಗಿದೆ. ತಡರಾತ್ರಿಯಾದರೂ ಬೆಂಕಿ ನಂದಿಸುವ ಕಾರ್ಯ ನಡೆದಿತ್ತು.
ಸ್ಥಳಕ್ಕೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ರೆವಿನ್ಯೂ ಇನ್ಸ್‍ಪೆಕ್ಟರ್ ಪ್ರಸನ್ನ ಹಾಗೂ ಇತರೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸ್‍ಪೆಕ್ಟರ್ ದೀಪಕ್ ಇತರ ಅಧಿಕಾರಿ ವರ್ಗದವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin