ಆಶ್ರಯ ಮನೆ 15 ವರ್ಷದವರೆಗೆ ಪರಭಾರೆ ಮಾಡುವ ಹಾಗಿಲ್ಲ

Spread the love

krishna

ಬೆಳಗಾವಿ,ನ.26- ಆಶ್ರಯ ಸಾಲ ಮನ್ನಾ ಮಾಡಿದರೂ ನಿಯಮಾನುಸಾರ 15 ವರ್ಷಗಳವರೆಗೆ ಅಡಮಾನ ಮುಂದುವರೆಯುತ್ತದೆ. ಈ ಷರತ್ತಿನಂತೆ 15 ವರ್ಷದವರೆಗೆ ಪರಭಾರೆ ಮಾಡಲು ಅವಕಾಶವಿರುವುದಿಲ್ಲ. 15 ವರ್ಷ ಪೂರ್ಣಗೊಂಡ ಫಲಾನುಭವಿಗಳ ಆರ್‍ಪಿಸಿ ಯಲ್ಲಿ ಅಡಮಾನ ತೆರವುಗೊಳಿಸಲಾಗುವುದು ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಸದನಕ್ಕೆ ತಿಳಿಸಿದರು. ವಿಧಾನ ಪರಿಷತ್‍ನಲ್ಲಿಂದು ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಕೆ. ಪ್ರತಾಪ್‍ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ವಸತಿ ಸಚಿವರು ಸಾಲ ತೀರಿದರೂ 15 ವರ್ಷಗಳವರೆಗೆ ಮನೆಗಳನ್ನು ಪರಭಾರೆ ಮಾಡಲು ಅವಕಾಶವಿಲ್ಲ. ಈ ಕಾರಣದಿಂದ ಸಾಲ ಮತ್ತು ಬಡ್ಡಿ ಮನ್ನಾ ಮಾಡಿದ್ದಾಗ್ಯೂ ಆರ್‍ಟಿಸಿ ಯಲ್ಲಿ ಅಡಮಾನ ಎಂಬ ಪದ ಮುಂದುವರೆದಿದೆ. ಅವಧಿ ಮುಗಿದ ಮೇಲೆ ಈ ಪದವನ್ನು ತೆರವುಗೊಳಿಸಲಾಗುವುದೆಂದು ತಿಳಿಸಿದರು.

ಪ್ರಸಕ್ತ ವರ್ಷ 6 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 52 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಉಳಿದ 5.48 ಲಕ್ಷ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. 2010-11 ನೇ ಸಾಲಿನಿಂದ ಮನೆಗಳ ನಿರ್ಮಾಣಕ್ಕೆ ಭೌತಿಕ ಪ್ರಗತಿ ಆಧರಿಸಿ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುವುದು.ಭೌತಿಕ ಪ್ರಗತಿಯನ್ನು ಗುರುತಿಸಲು ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರ ಆಧಾರದ ಮೇಲೆ ಫಲಾನುಭವಿಗಳಿಗೆ ನೇರವಾಗಿ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಶ್ರಯ ಸಾಲ ಮನ್ನಾ ಯೋಜನೆಯಡಿ 60.777 ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಉತ್ತರಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin