ಆಸ್ಟ್ರೇಲಿಯಾದಲ್ಲೂ ಜನಾಂಗೀಯ ದಾಳಿ, ಭಾರತದ ಪಾದ್ರಿಗೆ ಚೂರಿ ಇರಿತ

Spread the love

Padri-Austrelia--01

ಮೆಲ್ಬೋರ್ನ್, ಮಾ.20-ಅಮೆರಿಕ ಮತ್ತು ನ್ಯೂಜಿಲೆಂಡ್ ನಂತರ ಈಗ ಆಸ್ಟ್ರೇಲಿಯಾದಲ್ಲೂ ಭಾರತೀಯರ ವಿರುದ್ಧ ಜನಾಂಗೀಯ ದ್ವೇಷ ಹೊಗೆಯಾಡುತ್ತಿದೆ. ಭಾರತೀಯ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರ ಕುತ್ತಿಗೆಗೆ ದುಷ್ಕರ್ಮಿಯೊಬ್ಬ ಇರಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮೆಲ್ಬೊರ್ನ್ ಚರ್ಚ್‍ನಲ್ಲಿ ನಡೆದಿದೆ.   ಭಾರತೀಯನಾದ ನೀನು ಸಾಮೂಹಿಕ ಪ್ರಾರ್ಥನೆ ನಡೆಸಲು ಮತ್ತು ಧರ್ಮೋಪದೇಶ ಮಾಡಲು ಅನರ್ಹ ಎಂದು ದುಷ್ಕರ್ಮಿ ಅಬ್ಬರಿಸಿ ಇರಿದು ಕೊಲೆಗೆ ಯತ್ನಿಸಿದ್ದಾನೆ. ಅಮೆರಿಕದಲ್ಲಿ ಹೈದರಾಬಾದ್ ಟೆಕ್ಕಿ ಶ್ರೀನಿವಾಸ ಕೂಚಿಭೊಟ್ಲಾ ಮತ್ತು ಹರ್ಷಿತ್ ಪಟೇಲ್ ಹತ್ಯೆ ಹಾಗೂ ನ್ಯೂಜಿಲೆಂಡ್‍ನಲ್ಲಿ ಸಿಖ್ ಮೂಲಕ ವ್ಯಕ್ತಿಗಳ ಮೇಲೆ ನಡೆದ ಹಲ್ಲೆ ಘಟನೆಗಳಿಂದ ಭಾರತೀಯರು ಆತಂಕಗೊಂಡಿರುವಾಗಲೇ ಆಸ್ಟ್ರೇಲಿಯಾದಲ್ಲೂ ಇಂಥ ಘಟನೆ ಮರುಕಳಿಸಿದೆ.

ಮೆಲ್ಬೊರ್ನ್‍ನ ಫಾಕ್ನೆರ್‍ನ ಸೆಂಟ್ ಮ್ಯಾಥ್ಯೂಸ್ ಚರ್ಚ್‍ನಲ್ಲಿ ಇಟಲಿ ಭಾಷೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ಚಾಕುವಿನೊಂದಿಗೆ ಬಂದ ಆತ ಪಾದ್ರಿ ಫಾದರ್ ಟಾಮಿ ಕಲಥೂರ್ ಮಾಥ್ಯು (48) ಅವರ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಈ ಕೃತ್ಯ ಎಸಗುವುದಕ್ಕೂ ಮುನ್ನ, ನೀನು ಭಾರತೀಯ. ನೀನು ಹಿಂದು ಅಥವಾ ಮುಸ್ಲಿಂ ಆಗಿರಬೇಕು. ಕ್ರೈಸ್ತ ಧರ್ಮದ ಸಾಮೂಹಿಕ ಪಾರ್ಥನೆ ನಡೆಸಲು ಮತ್ತು ಧರ್ಮೋಪದೇಶ ಮಾಡಲು ಅನರ್ಹ ಎಂದು ಅಬ್ಬರಿಸಿದ್ದಾನೆ ಎಂದು ಹೇಳಲಾಗಿದೆ.

ಫಾದರ್ ಟಾಮಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ 72 ವರ್ಷದ ಸ್ಥಳೀಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬ್ರಾಡ್‍ಮೆಡೋಸ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕಿದ್ದು, ಜಾಮೀನು ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin