ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಸಜೀವ ದಹನವಾದ ಭಾರತ ಮೂಲದ ಮನ್ಮೀತ್‍ಗೆ ಶ್ರದ್ದಾಂಜಲಿ

Manmeet-01

ಮೆಲ್ಬರ್ನ್,ಅ.29- ಪಂಜಾಬ್ ಮೂಲದ ಬಸ್ ಚಾಲಕನ ಮೇಲೆ ವ್ಯಕ್ತಿಯೊಬ್ಬ ದಹನಶೀಲ ರಾಸಾಯನಿಕವನ್ನು ಹಾಕಿ ಹತ್ಯೆಗೈದ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆದಿದೆ. ಪ್ರಯಾಣಿಕರ ಮುಂದೆಯೇ ಈ ಕೃತ್ಯ ನಡೆದಿದ್ದು, ಐವರಿಗೆ ಸುಟ್ಟಗಾಯಗಳಾಗಿವೆ.  ಮನ್ಮೀತ್ ಅಲಿಶೇರ್ ಅವರ ಸಾವಿನ ಸಂತಾಪ ಸೂಚಕವಾಗಿ ಇಂದು ಬ್ರಿಸ್ಬೇನ್‍ನ ಲ್ಲಿ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂದು ಸ್ಥಳೀಯಾಡಳಿತೆ ಹೇಳಿದೆ. ನಿಲ್ದಾಣವೊಂದರಲ್ಲಿ ಬಸ್ ನಿಂತಾಗ, ಬಸ್ ಚಾಲಕ ಮನ್ಮೀತ್ ಅಲಿಶರ್(29) ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಬೆಂಕಿ ಹೊತ್ತಿಸುವ ದ್ರವ ಎರಚಿದ್ದಾನೆ. ಪರಿಣಾಮ ಅಲಿಶರ್ ಬಸ್ಸಿನೊಳಗೇ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ 48 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅಲಿಶರ್ ಒಳ್ಳೆಯ ಗಾಯಕನಾಗಿದ್ದು, ಬ್ರಿಸ್ಬೇನ್‍ನ ಪಂಜಾಬಿ ಸಮುದಾಯದಲ್ಲಿ ಖ್ಯಾತಿ ಗಳಿಸಿದ್ದ.ಈ ಘಟನೆಯಲ್ಲಿ ದಟ್ಟವಾದ ಹೊಗೆಯನ್ನು ಸೇವಿಸಿ ಅಸ್ವಸ್ಥರಾದ ಹಾಗೂ ಲಘು ಸುಟ್ಟ ಗಾಯಗಳನ್ನು ಪಡೆದ ಆರು ಮಂದಿಯನ್ನು ಒಡನೆಯೇ ಹತ್ತಿರದ ಆಸ್ಪತ್ರೆಗೆ ಒಯ್ಯಲಾಯಿತು. ಅಲಿಶೇರ್ ಅವರನ್ನು ಸಾಯಿಸಲಾಗಿರುವ ಈ ಘಟನೆಯಲ್ಲಿ ಭಯೋತ್ಪಾದನೆ ಅಥವಾ ಜನಾಂಗೀಯ ವೈಷಮ್ಯದ ಉದ್ದೇಶ ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದೊಂದು ಕೊಲೆಯಲ್ಲದ ನರಹತ್ಯೆ ಪ್ರಕರಣವಾಗಿದೆ ಎಂದು ಪೊಲೀಸ್ ಕಮಿಷನರ್ ಇಯಾನ್ ಸ್ಟುವರ್ಟ್ ಹೇಳಿದ್ದಾರೆ.

ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಜನರು ಬ್ಯೂಡೆಸರ್ಟ್ ರಸ್ತೆಯ ನಿಲ್ದಾಣದಲ್ಲಿ ಬಸ್ಸನ್ನು ಏರುತ್ತಿದ್ದಾಗ ವ್ಯಕ್ತಿಯೊಬ್ಬ ಬಸ್ ಚಾಲಕ ಮನ್ಮೀತ್ ಅಲಿಶೇರ್ ಅವರ ಮೇಲೆ ದಹನಶೀಲ ದ್ರವವನ್ನು ಸುರಿದಾಗ ಬೆಂಕಿ ಹೊತ್ತಿಕೊಂಡು ಮನ್ಮೀತ್ ಅವರನ್ನು ಬಲಿಪಡೆಯಿತು.

► Follow us on –  Facebook / Twitter  / Google+

Sri Raghav

Admin