ಆಸ್ಟ್ರೇಲಿಯಾ ಓಪನ್ ಸೆಮೀಸ್ಗೆ ಲಗ್ಗೆಯಿಟ್ಟ ಸಾನಿಯಾ ಜೋಡಿ
ಮೆಲ್ಬೋರ್ನ್, ಜ. 25- ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಜೋಡಿಯು ಟೈ ಬ್ರೇಕರ್ನಲ್ಲಿ 2 ನೇರ ಪಾಯಿಂಟ್ಸ್ಗಳ ಮೂಲಕ ಆಸ್ಟ್ರೇಲಿಯಾ ಓಪನ್ ಮಿಕ್ಸ್ಡ್ ಸೆಮೀಸ್ಗೆ ಲಗ್ಗೆ ಇಟ್ಟಿದ್ದಾರೆ. ಇಂದಿಲ್ಲಿ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇಂಡೋ- ಕೋಟ್ರಿಯಾನಾ ದ ಸಾನಿಯಾ ಹಾಗೂ ಡೋಡಿಂಗ್ ಜೋಡಿಯು ರೋಹನ್ ಬೋಪಣ್ಣ ಹಾಗೂ ಗೆಬ್ರಿಯಾಲಾ ದಾಬ್ರೋವಾಸಿಕಿ ಜೋಡಿಯ ವಿರುದ್ಧ ಟೈ ಬ್ರೇಕ್ನಲ್ಲಿ 2 ನೇರ ಪಾಯಿಂಟ್ಸ್ ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಮೊದಲ ಎರಡು ಸುತ್ತಿನಲ್ಲಿ ತೀವ್ರ ಪೈಪೋಟಿ ನಡೆಸಿದ ಈ ಜೋಡಿಯು 6-4, 3-6ರ ಸೆಟ್ಗಳಿಂದ ಸಮಬಲ ಸಾಧಿಸಿತು.
ಕೊನೆಯ ಸುತ್ತಿನಲ್ಲೂ ತೀವ್ರ ಪೈಪೋಟಿ ನಡೆಸಿದ ಸಾನಿಯಾ ಹಾಗೂ ಡೋಡಿಂಗ್ ಜೋಡಿಯು 10-10ರ ಸಮಬಲ ಸಾಧಿಸಿದರು. ಆದರೆ ಟೈ ಬ್ರೇಕ್ನಲ್ಲಿ ಎರಡು ಪಾಯಿಂಟ್ಸ್ಗಳನ್ನು ಕಲೆ ಹಾಕುವ ಮೂಲಕ 2-1 ಸೆಟ್ಗಳಿಂದ ರೋಹನ್ ಬೋಪಣ್ಣ ಜೋಡಿಯನ್ನು ಮಣಿಸಿತು. ಮಹಿಳೆಯರ ಡಬಲ್ಸ್ನಲ್ಲಿ ಸೋಲು ಕಂಡಿದ್ದ ಸಾನಿಯಾ ಮಿರ್ಜಾ ಈಗ ಮಿಕ್ಸ್ಡ್ ವಿಭಾಗದಲ್ಲಿ ಫೈನಲ್ನಲ್ಲಿ ಗೆಲ್ಲುವ ಉತ್ಸುಕತೆ ಹೊಂದಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಜೋಡಿಯು ಮತ್ತೊಬ್ಬ ಭಾರತೀಯ ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿಯನ್ನು ಎದುರಿಸಲಿದೆ.
< Eesanje News 24/7 ನ್ಯೂಸ್ ಆ್ಯಪ್ >