ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ : 105 ರನ್‍ಗಳಿಗೆ ಭಾರತ ಸರ್ವಪತನ, ಇನ್ನಿಂಗ್ಸ್ ಹಿನ್ನಡೆ

Kohli--01

ಪುಣೆ, ಫೆ.24- ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 2ನೇ ದಿನದಾಟದಲ್ಲಿ ಭಾರತ 105 ರನ್‍ಗೆ ಸರ್ವಪತನವಾಗಿ 155 ರನ್‍ಗಳ ಇನ್ನಿಂಗ್ಸ್ ಹಿನ್ನಡೆ ಸಾಧಿಸಿದೆ.  ಇಂದು ಬೆಳಗಿನ ಮೊದಲಾರ್ಧದಲ್ಲೇ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಕಾಡಿತ್ತು. ಮುರಳಿ ವಿಜಯ್ ಮತ್ತು ಕೆ.ಎಲ್.ರಾಹುಲ್ ಕಣಕ್ಕಿಳಿದು ಆಸೀಸ್‍ನ ವೇಗಿಗಳ ದಾಳಿಗೆ ಎಚ್ಚರಿಕೆಯ ಆಟ ಪ್ರದರ್ಶಿಸಿದರೂ ಅದು ಬಹಳಹೊತ್ತು ಉಳಿಯಲಿಲ್ಲ.

ಮಿಚೆಲ್ ಸ್ಟಾರ್ಕ್ ಮತ್ತು ಸ್ಟೀವ್ ಓ ಕಿಫೆ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿರುವ ಭಾರತದ ಬಹುಬೇಗನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದೆ.   ಆರಂಭದಲ್ಲಿ ವೇಗದ ಬೌಲರ್ ಮಿಚೆಲ್ ಸ್ಟಾಕ್ ಮತ್ತು ಹೇಜಲ್‍ವುಡ್ ಬೌಲಿಂಗ್ ದಾಳಿಗೆ ಮುರುಳಿ ವಿಜಯ್ 10, ಚೇತೇಶ್ವರ ಪೂಜಾರ 6 ಮತ್ತು ಪ್ರಚಂಡ ಫಾರ್ಮ್ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿ ಹೊರನಡೆದರು.   ತಂಡದ ಮೊತ್ತ ಕೇವಲ 44 ರನ್ ಆಗುವಷ್ಟರಲ್ಲಿ ಭಾರತ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡಿತು. ಈ ವೇಳೆ ಭಾರತಕ್ಕೆ ರಾಹುಲ್ 64 ರನ್ ಬಾರಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು.

ಪಂದ್ಯದ 32ನೇ ಓವರ್‍ನಲ್ಲಿ ಸ್ಟೀವ್ ಓ ಕಿಫ್ ಅವರು ರಾಹುಲ್(64), ಸಹಾ(0) ಮತ್ತು ರಹಾನೆ (13) ಅವರ ವಿಕೆಟ್ ಕಬಳಿಸಿ ಪೆವಿಲಿನ್‍ಗಟ್ಟಿದರು. ಇದರಿಂದ ಮತ್ತಷ್ಟು ಆಘಾತವುಂಟು ಮಾಡಿತು. ಇದಾದ ಬಳಿಕ ಕ್ರೀಸ್‍ಗಿಳಿದ ಅಶ್ವಿನ್(1), ಜಯಂತ್ ಯಾದವ್(2) ಮತ್ತು ಉಮೇಶ್ ಯಾದವ್ 4 ರನ್ ಗಳಿಸಿ ಬಹುಬೇಗನೆ ಪೆವಲಿನ್ ಹಾದಿ ಹಿಡಿದರು.
ಅಂತಿಮವಾಗಿ ಭಾರತ 40.1 ಓವರ್‍ಗಳಲ್ಲಿ 105 ರನ್‍ಗೆ ಆಲೌಟ್ ಆಗಿ 155 ರನ್‍ಗಳ ಹಿನ್ನಡೆ ಅನುಭವಿಸಿದೆ.   ಆಸ್ಟ್ರೇಲಿಯಾ ಪರ ಬಿಗುವಿನ ದಾಳಿ ನಡೆಸಿದ ಸ್ಟೀವ್ ಓ ಕೆಫಿ 6, ಸ್ಟಾರ್ಕ್ 2, ಹೇಜಲ್‍ವುಡ್ ಮತ್ತು ನಾಥನ್ ಲೈನ್ ತಲಾ ಒಂದು ವಿಕೆಟ್ ಪಡೆದು ಭಾರತವನ್ನು ಕಟ್ಟಿ ಹಾಕಿದರು.   ನಿನ್ನೆ ದಿನದಾಟದಂತ್ಯಕ್ಕೆ ಅಜೇಯ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಸ್ಟಾರ್ಕ್ ಇಂದು ಅಶ್ವಿನ್ ಅವರ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ಆಸೀಸ್‍ನ ಪ್ರಥಮ ಇನ್ನಿಂಗ್ಸ್‍ಗೆ ಅಂತ್ಯಬಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin