ಆ್ಯಂಬುಲೆನ್ಸ್ ಡಿಕ್ಕಿ : ಬೈಕ್ ಸವಾರ ಗಂಭೀರ

Spread the love

accident

ಎಚ್.ಡಿ.ಕೋಟೆ, ಸೆ.16-ಆ್ಯಂಬುಲೆನ್ಸ್ ಹಾಗೂ ಮೋಟರ್‍ಬೈಕ್ ಡಿಕ್ಕಿಯಾಗಿ ಸವಾರ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಪಟ್ಟಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಾಲೂಕಿನ ಭೀಮನಹಳ್ಳಿ ನಿವಾಸಿ ದಿಲೀಪ್ (26) ಗಂಭೀರ ಗಾಯಗೊಂಡಿದ್ದಾನೆ.ಇಂದು ಬೆಳಗ್ಗೆ 8.30ರ ಸಮಯದಲ್ಲಿ ಕೆಲಸದ ನಿಮಿತ್ತ ಹುಣಸೂರು ಕಡೆಗೆ ಬೈಕ್‍ನಲ್ಲಿ ದಿಲೀಪ್ ಹೋಗುತ್ತಿದ್ದ. ಹುಣಸೂರು ಮಾರ್ಗದಿಂದ ಹೋಗುತ್ತಿದ್ದ ಆ್ಯಂಬುಲೆನ್ಸ್ ಗ್ರಾಮದ ಸಮೀಪವೇ ಡಿಕ್ಕಿ ಹೊಡೆದಿದೆ.ತಕ್ಷಣ ಆತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್, ಸಬ್‍ಇನ್ಸ್‍ಪೆಕ್ಟರ್ ಅಶೋಕ್ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin