ಆ್ಯಂಬುಲೆನ್ಸ್ ಸಮೇತ ಪ್ರವಾಹದಲ್ಲಿ ಕೊಚ್ಚಿಹೋದ ಕುಂಟುಂಬ
ಲೊಹರ್ದಗ(ಜಾರ್ಖಂಡ್),ಜು.26-ಆ್ಯಂಬುಲೆನ್ಸ್ ಹಾಗೂ ಪಾಶ್ರ್ವವಾಯು ಪೀಡಿತ ರೋಗಿ ಸಮೇತ ಒಂದೇ ಕುಟುಂಬದ ನಾಲ್ವರು ಕೊಯಿಲ್ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಜಾರ್ಖಂಡ್ನ ಲೊಹರ್ದಗ ಜಿಲ್ಲೆಯಲ್ಲಿ ನಡೆದಿದೆ. ಗೋಪಾಲ್ ಪ್ರಸಾದ್,ಆತನ ಪತ್ನಿ ಶಾಂತಿ ದೇವಿ (50),ಮಕ್ಕಳಾದ ಕೌಶಲ್ ಕಿಶೋರ್(28) ಹಾಗೂ ಆಶಾ ಪ್ರಿಯಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವರು. ಗೋಪಾಲ್ ಪ್ರಸಾದ್ ಅವರು ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು.ಅವರನ್ನು ಆತನ ಕುಟುಂಬಸ್ಥರು ಆ್ಯಂಬುಲೆನ್ಸ್ ಮೂಲಕ ತಡರಾತ್ರಿ 2 ರ ಸಮಯದಲ್ಲಿ ಪಲ್ಮಾವೊ ಜಿಲ್ಲೆಯ ಚೈನ್ಪುರ್ನಿಂದ ರಾಂಚಿಯ ಆಸ್ಪತ್ರೆಗೆ ಹೋಗುತ್ತಿದ್ದಾಗ ಕೊಯಿಲ್ ನದಿಯ ಸೇತುವೆ ಬಳಿ ಆ್ಯಂಬುಲೆನ್ಸ್ ಇಂಜಿನ್ ಆಫ್ ಆಗಿ ಮುಂದೆ ಸಾಗದೆ ಅಲ್ಲೆ ನಿಲ್ಲುತ್ತದೆ.
ಚಾಲಕನ ಸಲಹೆಯಂತೆ ರೋಗಿಯ ಪತ್ನಿ ಶಾಂತಿ ದೇವಿ,ಮಕ್ಕಳಾದ ಕೌಶಲ್ ಕಿಶೋರ್ ಹಾಗೂ ಆಶಾ ಪ್ರಿಯಾ ಆ್ಯಂಬುಲೆನ್ಸ್ ನಿಂದ ಕೆಳಗೆ ಇಳಿದು ತಳ್ಳಲು ಮುಂದಾದಾಗ ನದಿ ನೀರಿನ ಪ್ರವಾಹ ಅಧಿಕವಾಗುತ್ತದೆ.ಇದರ ಪರಿಣಾಮ ಪ್ರವಾಸದ ರಭಸಕ್ಕೆ ನಿಲ್ಲಲಾಗದೆ ಅವರು ನದಿಯಲ್ಲೇ ಆ್ವಂಬುಲೆನ್ಸ್ ಸಮೇತ ಕೊಚ್ಚಿ ಹೋಗುತ್ತಾರೆ.ಆದರೆ ಅಸಹಾಕನಾದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದೇನೆ.
ಕೊಯಿಲ್ ನದಿಯ ಮೇಲ್ಸೆತುವೆ ಮೇಲೆ ನೀರು ಅಧಿಕ ಪ್ರಮಾಣದಲ್ಲಿ ಹರಿಯುತ್ತಿದ್ದ ಹಿನ್ನಲೆಯಲ್ಲಿ ಚಾಲಕ ಮುಂದೆ ಹೋಗಲು ನಿರಾಕರಿಸಿದ್ದ ಆದರೆ ಕುಟುಂಬಸ್ಥರ ಒತ್ತಾಯದ ಮೆರೆಗೆ ಆತ ಚಾಲನೆ ಮಾಡಿದ್ದೆ ಈ ದುರ್ಘಟನೆಗೆ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಕಾರ್ತಿಕ್ ಮಾಹಿತಿ ನೀಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >