ಇಂಡೋನೆಷ್ಯಾ ಸೇನಾ ವಿಮಾನ ಪತನ : 13 ಯೋಧರ ಸಾವು

Indonasia-13-Killed

ಜಕಾರ್ತ. ಡಿ.18-ಇಂಡೋನೆಷ್ಯಾ ಸೇನಾ ವಿಮಾನವೊಂದು ಪಪುವಾ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಪತನಗೊಂಡು ಅದರಲ್ಲಿದ್ದ ಎಲ್ಲ 13 ಮಂದಿ ಸಾವಿಗೀಡಾಗಿದ್ದಾರೆ. ಇಂಡೋನೆಷ್ಯಾದ ಮಿಲಿಟರಿ ಹಕ್ರ್ಯೂಲಸ್ ಸಿ-130 ವಿಮಾನವು ಟಿಮಿಕಾದಿಂದ ವಾಮೆನಾಗೆ ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದಾಗ ಪುಪುವಾ ಪೂರ್ವ ಪ್ರಾಂತ್ಯದ ದುರ್ಗಮ ಪ್ರದೇಶದಲ್ಲಿ ಪತನಗೊಂಡಿತು. ಇದರಲ್ಲಿದ್ದ ಮೂವರು ಪೈಲೆಟ್‍ಗಳು ಮತ್ತು 10 ಸಿಬ್ಬಂದಿ ಸಾವಿಗೀಡಾದರು ಎಂದು ವಾಯು ಪಡೆ ಮುಖ್ಯಸ್ಥ ಅಗಸ್ ಸುಪ್ರಿಯಾಟ್ನಾ ಹೇಳಿದ್ದಾರೆ. ಪ್ರತಿಕೂಲ ಹವಾಮಾನದಿಂದ ಈ ದುರಂತ ಸಂಭವಿಸಿದೆ. ಇಂಡೋನೆಷ್ಯಾ ವಿಶ್ವದ ಬೃಹತ್ ದ್ವೀಪರಾಷ್ಟ್ರಗಳಲ್ಲಿ ಒಂದಾಗಿದ್ದು, ಇಲ್ಲಿ ಅಗಾಗ ವಿಮಾನ ಮತ್ತು ಹೆಲಿಕಾಪ್ಟರ್ ದುರಂತಗಳು ಸಂಭವಿಸುತ್ತಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin