ಇಂದಿನಿಂದ ಟ್ರಾಫಿಕ್ ಸುಧಾರಣೆಗೆ ಭಾರಿ ಕಾರ್ಯಾಚರಣೆ
ಬೆಳಗಾವಿ,ಫೆ.6- ಟ್ರಾಫಿಕ್ ಸುಧಾರಣೆಗೆ ವ್ಯಾಪಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಹಾಗೂ ಎಸ್ಪಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ತಿಳಿಸಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ನಗರದಲ್ಲಿ ಟ್ರಾಫಿಕ್ ಅಫೆನ್ಸಸ್ ತೀರಾ ಹೆಚ್ಚಿದೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕದಲ್ಲಿ ಟ್ರಾಫಿಕ್ ಸೆನ್ಸ್, ಕಾನೂನುಗಳ ಪರಿಪಾಲನೆ ಇಲ್ಲ. ಸುಪ್ರೀಂಕೋರ್ಟಗೆ ನಾನೇ ವಾಗ್ದಾನ ನೀಡಿದಂತೆ ಟ್ರಾಫಿಕ್ ಸುಧಾರಣೆ ಮಾಡುವುದು ಪೊಲೀಸರಿಗೆ ಅನಿವಾರ್ಯ. ಇಂದಿನಿಂದಲೇ ಪೊಲೀಸ್ ಕಾರ್ಯಾಚರಣೆ ನಡೆಯಲಿದೆ ಎಂದರು. ಪೊಲೀಸ್ ಆಯುಕ್ತರು, ಎಸ್ಪಿ, ಆರ್ಟಿಓ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಟ್ರಾಫಿಕ್ ಮತ್ತು ಕಾನೂನುಗಳ ಪರಿಪಾಲನೆ ಮಾಡಿಸುವ ಜವಾಬ್ದಾರಿ ಹೊಂದಿದ್ದು, ನ್ಯಾಯಾಲಯ ಅವರ ಕಾರ್ಯವೈಖರಿ ಮೇಲೆ ನೇರ ಕಣ್ಣಿಡಲಿದೆ ಎಂದರು.
< Eesanje News 24/7 ನ್ಯೂಸ್ ಆ್ಯಪ್ >