ಇಂದಿನಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡರೆ ಶೇ.0.75ರಷ್ಟು ರಿಯಾಯಿತಿ

Petrol

ನವದೆಹಲಿ, ಡಿ.13-ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುವಾಗ ಡಿಜಿಟಲ್ ರೂಪದಲ್ಲಿ ಹೆಚ್ಚು ಹಣ ಪಾವತಿ ಮಾಡಿದರೆ ಗ್ರಾಹಕರಿಗೆ ಇಂದಿನಿಂದ ಶೇಕಡ 0.75ರಷ್ಟು ರಿಯಾಯಿತಿ ಲಭಿಸಲಿದೆ. ನಿನ್ನೆ ಮಧ್ಯರಾತ್ರಿಯಿಂದ ಈ ಡಿಸ್ಕೌಂಟ್ ಜಾಗೆ ಬಂದಿದೆ. ಇಂಧನ ಖರೀದಿ ವೇಳೆ ಗ್ರಾಹಕರು ಸಂಪೂರ್ಣ ಮೊತ್ತವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್, ಇ-ವ್ಯಾಲೆಟ್, ಪ್ರಿ-ಪೇಯ್ಡ್ ಲಾಯಲ್ಟಿ ಕಾರ್ಡ್ ಮೂಲಕ ಆರಂಭದಲ್ಲಿ ಪಾವತಿಸಬೇಕು. ಬಳಿಕ ಅವರ ಖಾತೆಗೆ ದರ ಕಡಿತದ ಮೊತ್ತ ಮೂರು ದಿನಗಳ ಒಳಗಾಗಿ ಮರು ಸಂದಾಯವಾಗಲಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಹೇಳಿದೆ.

1 ಲೀಟರ್ ಪೆಟ್ರೋಲ್‍ನನ್ನು ಡಿಜಿಟಲ್ ಪಾವತಿ ಮೂಲಕ ಖರೀದಿಸಿದರೆ, ದೆಹಲಿ ದರದ ಅನ್ವಯ ಗ್ರಾಹಕರಿಗೆ ಇಂಧನ ಲಭಿಸಲಿದೆ. ಪೆಟ್ರೋಲ್‍ಗೆ 49 ಪೈಸೆ ಮತ್ತು ಡಿಸೇಲ್‍ಗೆ 41 ಪೈಸೆ ರಿಯಾಯಿತಿ ದೊರೆಯಲಿದ್ದು, ರಿಸ್ಕೌಂಟ್ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.  ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಕಳೆದ ವಾರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪೆಟ್ರೋಲ್, ಡೀಸೆಲ್ ಖರೀದಿ ವೇಳೆ ಡಿಜಿಟಲ್ ರೂಪದಲ್ಲಿ ಪಾವತಿ ಮಾಡಿದರೆ ರಿಯಾಯಿತಿ ನೀಡುವ ಯೋಜನೆಯನ್ನು ಘೋಷಿಸಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin