ಇಂದೋರ್-ಪಾಟ್ನಾ ಘೋರ ರೈಲು ದುರಂತ : ನೂರು ದಾಟಿದ ಸಾವಿನ ಸಂಖ್ಯೆ

Spread the love

Train-0000000000000000000

ಕಾನ್ಪುರ, ನ.20-ಸಮೀಪದ ಪುಖರಾಯನ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿ, ಸುಮಾರು 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.   ಇಂದು ಬೆಳಗಿನ ಜಾವ 3.10ರ ಸುಮಾರಿನಲ್ಲಿ ಪ್ರಯಾಣಿಕರೆಲ್ಲ ಸುಖನಿದ್ರೆಯಲ್ಲಿದ್ದಾಗ ಇಂದೋರ್-ಪಾಟ್ನಾ ಎಕ್ಸ್ಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿ ಈ ಘೋರ ದುರ್ಘಟನೆ ಸಂಭವಿಸಿತು.   ಈ ದುರಂತದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು, 150ಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ದುರಂತ ನಡೆದ ಸ್ಥಳದಿಂದ ಈವರೆಗೆ 100ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರುವ ಆತಂಕವಿದೆ.

55-Killed

ಇಂದೋರ್ನಿಂದ ಪಾಟ್ನಾಗೆ ಚಲಿಸುತ್ತಿದ್ದ ರೈಲು ಕಾನ್ಪುರದಿಂದ 100 ಕಿ.ಮೀ. ದೂರದಲ್ಲಿರುವ ಪುಖರಾಯಂ ರೇಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿ ಈ ದುರ್ಘಟನೆ ಸಂಭವಿಸಿದೆ.
ಉರುಳಿಬಿದ್ದ ರೈಲಿನ ಅವಶೇಷಗಳ ಒಳಗೆ ಸಿಲುಕಿದ್ದ 100ಕ್ಕೂ ಅಧಿಕ ಶವಗಳನ್ನು ಈವರೆಗೆ ಹೊರತೆಗೆಯಲಾಗಿದೆ. ಬೋಗಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ಅನೇಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಗಾಯಗೊಂಡ 150ಕ್ಕೂ ಹೆಚ್ಚು ಜನರನ್ನು 30 ಆಂಬ್ಯುಲೆನ್ಸ್ಗಳ ಮೂಲಕ ಹತ್ತಿರ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಇವರಲ್ಲಿ ಕೆಲವರ ಪರಿಸ್ಥಿತಿ ಶೋಚನಿಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Train

ಸುದ್ದಿ ತಿಳಿದ ಕೂಡಲೆ ಹಿರಿಯ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಸಹ ನೆರವು ನೀಡಿದ್ದಾರೆ ಎಂದು ಭಾರತೀಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.  ಎನ್ಡಿಆರ್ಎಫ್, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.  ನಾಲ್ಕು ಹವಾನಿಯಂತ್ರಿತ ಕೋಚ್ ಸೇರಿದಂತೆ ರೈಲಿನ 14 ಬೋಗಿಗಳು ನಜ್ಜುಗುಜಾ್ಜಗಿದ್ದು,. ಪ್ರಯಾಣಿಕರ ಸರಕು-ಸಮಾನು-ಸರಂಜಾಮುಗಳು ಆ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಿಂದಾಗಿ ಈ ಪುಖರಾಯನ್, ಝಾನ್ಸಿ, ಇಂದೋರ್ ಸೇರಿದಂತೆ ಈ ಮಾರ್ಗದ ಅನೇಕ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ.
ಖುದ್ದಾಗಿ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿನೆ ನೀಡಿದ್ದಾರೆ. ರೇಲ್ವೆ ಸಚಿವ ಸುರೇಶ್ ಪ್ರಭು ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ.

Train-1

ದುರಂತದಿಂದ ಪಾರಾದ ಇತರ ಪ್ರಯಾಣಿಕರು ತಮ್ಮ ಪ್ರಯಾಣ ಮುಂದುವರಿಸಲು ಅನುಕೂಲವಾಗುವಂತೆ ಬಸ್ಗಳ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ಕೇಂದ್ರೀಯ ರೇಲ್ವೆ ವಕ್ತಾರ ವಿಜಯ್ ಕುಮಾರ್ ತಿಳಿಸಿದ್ದಾರೆ.  ಈ ಭೀಕರ ದುರ್ಘಟನೆಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಗಣ್ಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಪರಿಹಾರ:

ಮೃತಪಟ್ಟ ದುರ್ದೈವಿಗಳ ಕುಟುಂಬದವರಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 8.5 ಲಕ್ಷ ರೂ.ಗಳು ಹಾಗೂ ಗಾಯಾಳುಗಳ ಚಿಕಿತ್ಸೆಗಾಗಿ ತಲಾ 1 ಲಕ್ಷ ರೂ.ಗಳ ಪರಹಾರವನ್ನು ಘೋಷಿಸಿದೆ.  ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೃತಪಟ್ಟದವರ ಹತ್ತಿರ ಬಂಧುಗಳಿಗೆ ತಲಾ 5 ಲಕ್ಷ ರೂ.ಗಳು ಹಾಗೂ ಗಾಯಾಳುಗಳಿಗೆ ತಲಾ 50,000 ರೂ.ಗಳನ್ನು ಪ್ರಕಟಿಸಿದ್ದಾರೆ. ರೇಲ್ವೆ ಸಚಿವ ಸುರೇಶ್ ಪ್ರಭು ಕೇಂದ್ರ ಸರ್ಕಾರ ಪರವಾಗಿ ಮೃತರ ಕುಟುಂಬದವರಿಗೆ ತಲಾ 3.5 ಲಕ್ಷ ರೂ. ಪರಿಹಾರ ಹಾಗೂ ತೀವ್ರ ಗಾಯಗೊಂಡವರಿಗೆ ತಲಾ 50,000 ರೂ.ಗಳ ಪರಿಹಾರ ಘೋಷಿಸಿದ್ದಾರೆ.

45-Dead

ತನಿಖೆಗೆ ಆದೇಶ:

ರೈಲು ಹಳಿ ತಪ್ಪಲು ಕಾರಣವಾದ ಘಟನೆ ತಿಳಿಯಲು ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ.

ಸಹಾಯವಾಣಿ:

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಸಹಾಯವಾಣಿ ಸೇವೆಯನ್ನು ಆರಂಭಿಸಿದೆ. ಇಂದೋರ್-07411072, ಉಜ್ಜಯನ್-07342560906, ರಟ್ಲಂ-074121072, ಓರಯ್-051621072, ಜಾನ್ಸಿ-05101072, ಪುಖರಾಯನ್-05113270239.

► Follow us on –  Facebook / Twitter  / Google+

> ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಸಂತಾಪ 

Sri Raghav

Admin