ಇದೆ 14 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

congrees

 

ಧಾರವಾಡ,ಸೆ.7- ರಾಜ್ಯ ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಇದೇ 14ರಂದು ಬೆಳಿಗ್ಗೆ ಭಾರತೀಯ ಜನತಾ ಪಕ್ಷ ನಗರದ ಜಿಲ್ಲಾ ರೈತ ಮೊರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹು…ಧಾ ಮಹಾನಗರ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯ ರೈತರು ಬೆಳೆದ ಬೆಳೆಗಳಾದ ಶೇಂಗಾ, ಮೆಕ್ಕೆ, ಜೋಳ, ಈರುಳ್ಳಿ, ಬೀಟಿ ಹತ್ತಿ, ಮೆಣಸಿನಕಾಯಿ, ಸೋಯಾಬೀನ, ಆಲೂಗಡ್ಡೆ ಇತ್ಯಾದಿ ಬೆಳೆಗಳನ್ನು ಬೆಳೆದಿದ್ದು, ಮಳೆಯ ಕೊರತೆಯಿಂದ ಒಣಗಿದ ಸ್ಥಿತಿಯಲ್ಲಿದ್ದು, ರೈತ ಸಮುದಾಯ ಸಂಕಷ್ಟದಲ್ಲಿದ್ದಾನೆ ಎಂದರು.

ಕೆಲವೂಂದು ಪ್ರದೇಶಗಳಲ್ಲಿ ಈಗಾಗಲೇ ಬೆಳೆಗಳು ಹಾನಿಯಾಗಿದ್ದು, ಇನ್ನು ಕೆಲವು ಪ್ರದೇಶಗಳಲ್ಲಿ ಈ ವಾರದಲ್ಲಿ ಮೆಳೆಯಾಗದೆ ಹೋದರೆ ಎಲ್ಲಾ ಬೆಳೆಗಳು ನಾಶವಾಗುವ ಹಂತದಲ್ಲಿವೆ. ಕೊಡಲೇ ರಾಜ್ಯ ಕಾಂಗ್ರೆಸ್ ಸರಕಾರ ಎಚ್ಚೆತ್ತು ಕೊಂಡು ರೈತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.ಬರ ಪರಿಹಾರದ ಹಣ ತಕ್ಷಣ ರೈತರ ಖಾತೆಗಳಿಗೆ ಮುತ್ತಿಗೆ…ಜಮಾ ಮಾಡಬೇಕು. ಆಣೆಕಟ್ಟುಗಳಿರುವ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸಿ ದನ ಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಬರಪೀಡಿತ ಪ್ರದೇಶಗಳ

 

 

ರೈತರ ಕಂದಾಯವನ್ನು ರಾಜ್ಯ ಸರಕಾರ ಕೊಡಲೇ ಮನ್ನಾ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇಸುವಂತೆ ಆಗ್ರಹಿಸಿ ಈ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರಕಾರ ಇದಕ್ಕೂ ನಿರ್ಧಾರ ಕೈಗೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದೆಂದು ಏಗನಗೌಡರ ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಸಣ್ಣ ಬೆಳವಣಕಿ, ರುದ್ರಯ್ಯ ಚಿಕ್ಕಮಠ, ಎಚ್.ಎಲ್, ಕಾಳೆ, ಬಿ.ಎಸ್. ಹಲಗಣ್ಣವರ, ಈಶ್ವರಗೌಡ ಪಾಟೀಲ, ಗುರಿಸಿದ್ದಗೌಡ ಪಾಟೀಲ, ಮಾಹಾಂತೇಶ ಕಾರಿಕಾಯಿ ಇನ್ನಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin