ಇನ್ನೂ ಸಿಕ್ಕಿಲ್ಲ ಅಪಹರಣಕ್ಕೊಳಗಾದ ವಿದ್ಯಾರ್ಥಿ ಶರತ್ ಸುಳಿವು

Spread the love

Sharat-01

ಬೆಂಗಳೂರು, ಸೆ.16- ಅಪಹರಣಕ್ಕೊಳಗಾಗಿರುವ ಡಿಪ್ಲಮೋ ವಿದ್ಯಾರ್ಥಿ ಶರತ್ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಜ್ಞಾನಭಾರತಿ ಪೆÇಲೀಸ್ ಠಾಣೆ ವ್ಯಾಪ್ತಿಯ ಮುನೇಶ್ವರ ನಗರ ಉಲ್ಲಾಳ ಮುಖ್ಯರಸ್ತೆಯ 6ನೆ ಕ್ರಾಸ್ ನಿವಾಸಿ, ಉದ್ಯಮಿ ನಿರಂಜನ್ ಎಂಬುವರ ಪುತ್ರ ಶರತ್ (19)ನನ್ನು ಯಾರು ಅಪಹರಣ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.  ಕೆಲ ದಿನಗಳ ಹಿಂದೆಯಷ್ಟೆ ಶರತ್ ಹೊಸ ಬುಲೆಟ್ ಬೈಕ್ ಖರೀದಿಸಿದ್ದನು. ಈ ಬೈಕನ್ನು ಸ್ನೇಹಿತರಿಗೆ ತೋರಿಸಿಕೊಂಡು ಬರುವುದಾಗಿ ಸೆ.13ರಂದು ಮನೆಯಿಂದ ಬುಲೆಟ್ ಬೈಕ್ ತೆಗೆದುಕೊಂಡು ಹೋದ ಶರತ್‍ನನ್ನು ಅಪಹರಣಕಾರರು ಅಪಹರಿಸಿದ್ದಾರೆ.

ತದನಂತರ ಶರತ್ ಅವರ ತಂದೆಗೆ ಅಪಹರಣಕಾರರು 50 ಲಕ್ಷಕ್ಕೆ ಬೇಡಿಕೆ ಇಟ್ಟು ಸಂದೇಶ ರವಾನಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೆÇಲೀಸರು ಶರತ್ ಸ್ನೇಹಿತರಿಂದ ಹಲವು ಮಾಹಿತಿ ಕಲೆ ಹಾಕುತ್ತಿದ್ದಾರೆ.   ಆತ ಅಂದು ಎಲ್ಲಿಗೆ ಹೋಗಿದ್ದ, ಯಾರ್ಯಾರನ್ನು ಸಂಪರ್ಕಿಸಿದ್ದ ಎಂಬ ಬಗ್ಗೆ ಸ್ನೇಹಿತರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದು ಅಪಹರಣಕಾರರು ಹಾಗೂ ಶರತ್‍ಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Facebook Comments

Sri Raghav

Admin