ಇನ್ನೊಂದು ತಿಂಗಳಲ್ಲಿ ಮರಳಿನ ಸಮಸ್ಯೆ ಇರಲ್ಲ
ಬೆಂಗಳೂರು, ಜೂ.9- ಮುಂದಿನ ಒಂದು ತಿಂಗಳೊಳಗೆ ಜನ ಸಾಮಾನ್ಯರು, ಬಡವರು ಸೇರಿದಂತೆ ಎಲ್ಲರಿಗೂ ಸುಲಭ ರೀತಿಯಲ್ಲಿ ಮರಳು ಸಿಗುವಂತೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲ್ಕರ್ಣಿ ವಿಧಾನಪರಿಷತ್ಗೆ ತಿಳಿಸಿದರು. ರಾಜ್ಯದಲ್ಲಿ ಒಟ್ಟು 322 ಮರಳು ಬ್ಲಾಕ್ಗಳನ್ನು ಗುರಿತಿಸಲಾಗಿದೆ. ಇದರಲ್ಲಿ ಸುಮಾರು 222 ಬ್ಲಾಕ್ಗಳು 15 ದಿನಗಳೊಳಗೆ ಕಾರ್ಯಾರಂಭ ಮಾಡಲಿವೆ. ಹಾವೇರಿ ಗದಗ ಜಿಲ್ಲೆಯಲ್ಲಿ ಮರಳು ಬ್ಲಾಕ್ಗಳಿಗೆ ಟೆಂಡರ್ ಕರೆಯಲಾಗಿದೆ. ಒಂದು ತಿಂಗಳೊಳಗೆ ಎಲ್ಲರಿಗೂ ಮರಳು ದೊರಕುವಂತೆ ಸರ್ಕಾರ ಕ್ರಮ ಜರುಗಿಸಲಿದೆ ಎಂದು ಅವರು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಭಾನುಪ್ರಕಾಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಮರಳು ನೀತಿ ಜಾರಿಗೆ ಬಂದ ಮೇಲೆ ಮರಳಿನ ಸಮಸ್ಯೆ ಉಂಟಾಗಿದೆ. ಆದರೂ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಮರಳು ವಿತರಣೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ಒಂದು ಹಂತದಲ್ಲಿ ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಪ್ರತಿ ಪಕ್ಷದ ನಾಯಕ ಈಶ್ವರಪ್ಪ ಜನಸಾಮಾನ್ಯರಿಗೆ ಇನ್ನು ಮರಳು ಸಿಗುವುದಿರಲಿ, ಪ್ರಾಮಾಣಿಕ ಅಧಿಕಾರಿಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಲೂಟಿ ಹೊಡೆಯುವವರಿಗೆ ಸರ್ಕಾರದಿಂದ ರಕ್ಷಣೆ ಸಿಗುತ್ತಿದ್ದು, ಲಂಚ ನೀಡಿದರೆ ಏನು ಬೇಕಾದರೂ ಸಿಗುತ್ತದೆ. ಯಾವ ಸರ್ಕಾರದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
< Eesanje News 24/7 ನ್ಯೂಸ್ ಆ್ಯಪ್ >