ಇಪ್ಪತ್ತೆಂಟು ಚೀನಿ ಪ್ರವಾಸಿಗರೂ ಸೇರಿದಂತೆ 31 ಜನರಿದ್ದ ದೋಣಿ ನಾಪತ್ತೆ

Spread the love

Boat-Missing

ಕೌಲಲಂಪೂರ್, ಜ.29-ಇಪ್ಪತ್ತೆಂಟು ಚೀನಿ ಪ್ರವಾಸಿಗರೂ ಸೇರಿದಂತೆ 31 ಜನರಿದ್ದ ದೋಣಿಯೊಂದು ಬರ್ನಿಯೊ ಜಲ ಪ್ರದೇಶದಲ್ಲಿ ಕಣ್ಮರೆಯಾಗಿದೆ ಎಂದು ಮಲೇಷ್ಯಾ ಸಾಗರ ಜಾಗೃತದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದೋಣಿ ಶನಿವಾರದಿಂದ ನಾಪತ್ತೆಯಾಗಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ.. ನಾವು ದೋಣಿಗಾಗಿ ಶೋಧ ಮತ್ತು ರಕ್ಷಣೆ ಕಾರ್ಯ ಮುಂದುವರಿಸಿದ್ದೇವೆ ಎಂದು ಸರ್ಕಾರಿ ವಕ್ತಾರೊಬ್ಬರು ತಿಳಿಸಿದ್ದಾರೆ. ಈ ದೋಣಿಯಲ್ಲಿ 28 ಚೀನಿ ಪ್ರವಾಸಿಗರಲ್ಲದೇ ಒಬ್ಬ ಕ್ಯಾಪ್ಟನ್ ಮತ್ತು ಇಬ್ಬರು ಸದಸ್ಯರೂ ಸಹ ಇದ್ದರು. ನಿನ್ನೆ ಬೆಳಗ್ಗೆಯಿಂದ ನೌಕೆ ನಾಪತ್ತೆಯಾಗಿದೆ. ನಿನ್ನೆ ಜಲಪ್ರದೇಶದಲ್ಲಿ ಆತಂಕಕಾರಿ ವಾತಾವರಣವಿತ್ತು.

ಪೂರ್ವ ಸಬ್ಹಾ ರಾಜ್ಯದ ರಾಜಧಾನಿ ಕೋಟಾ ಕಿನಾಬಲುದಿಂದ ಪಶ್ಚಿಮಕ್ಕೆ 60 ಕಿ.ಮೀ. ದೂರದ ದ್ವೀಪತಾಣಕ್ಕೆ ಇವರು ತೆರಳುತ್ತಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin