ಇಬ್ಬರು ಉಗ್ರರ ಜೀವಂತ ಸೆರೆ : ಭಾರತ-ಪಾಕ್ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆ

Arrest

ನವದೆಹಲಿ, ಅ.3- ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಲ್ಲಿ ನಿತ್ಯ ಗುಂಡಿನ ಚಕಮಕಿ ನಡೆಯುತ್ತಿದೆ. ನಿತ್ಯವೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ನಡೆಯಿತು. ಕಳೆದ ರಾತ್ರಿ ಕೂಡ ಬಾರಾಮುಲ್ಲಾ ಸೇನಾ ನೆಲೆ ಮತ್ತು ಬಿಎಸ್ಎಫ್ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದರು.  ಈ ಕಾಳಗದಲ್ಲಿ ಭಾರತದ ಯೋಧನೊಬ್ಬ ಹುತಾತ್ಮನಾಗಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಅತ್ತ, ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದ್ದು ಇಬ್ಬರನ್ನು ಜೀವಂತ ಸೆರೆ ಹಿಡಿಯಲಾಗಿದೆ. ಉರಿಯಲ್ಲಿ ಇಂಥದ್ದೇ ಘಟನೆ ನಡೆದು 19 ಯೋಧರನ್ನು ಹತ್ಯೆ ಮಾಡಿದ ಎರಡು ವಾರಗಳ ಬಳಿಕ ಈ ದಾಳಿ ನಡೆದಿದೆ. ಈ ಘಟನೆಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.

ಬಾರಾಮುಲ್ಲಾ ಜಿಲ್ಲೆಯ ಜಂಬಜ್ಪುರ 46 ರಾಷ್ಟ್ರೀಯ ರೈಫಲ್ ಕ್ಯಾಂಪಿನ ಮೇಲೆ ರಾತ್ರಿ 10.30ರ ಸುಮಾರಿಗೆ ಈ ದಾಳಿ ನಡೆದಿದ್ದು, ಗುಂಡಿನ ಚಕಮಕಿ ನಡೆದಿದೆ. ಸೇನಾ ಶಿಬಿರದ ಬಳಿ ಇದ್ದ ಸಾರ್ವಜನಿಕ ಉದ್ಯಾನವನಕ್ಕೆ ಪ್ರವೇಶಿಸುವ ಪ್ರಯತ್ನ ನಡೆಸಿದರೂ, ಸೇನೆ ಇದಕ್ಕೆ ಅವಕಾಶ ನೀಡಲಿಲ್ಲ. ಬಳಿಕ ಜೀಲಂ ನದಿ ದಂಡೆಯಿಂದ ಕಾರ್ಯಾಚರಣೆ ನಡೆಸಿದರು ಎಂದು ಬಾರಾಮುಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಿತ್ಯವೂ ಗುಂಡಿನ ಚಕಮಕು ನಡೀತಿದೆ. ಕಳೆದ ರಾತ್ರಿ ಬಾರಾಮುಲ್ಲಾ ಜಿಲ್ಲೆಯ ಜಾಂಬಾಜ್ ಪೊೀರ್ ಎಂಬಲ್ಲಿ ರಾಷ್ಟ್ರೀಯ ರೈಫಲ್ನ 46ನೇ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ರಾತ್ರಿ ಹತ್ತೂವರೆ ಗಂಟೆ ಸುಮಾರಿಗೆ ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದಾರೆ.

ಇದೇ ಹೊತ್ತಿಗೆ ಸಮೀಪದ ಭಾರತೀಯ ಗಡಿ ಭದ್ರತಾ ಪಡೆಯ ಕಚೇರಿ ಮೇಲೂ ಅಟ್ಯಾಕ್ ಆಗಿದೆ. ಸುಮಾರು ನಾಲ್ಕೈದು ಶಸ್ತ್ರಸಜ್ಜಿತ ಭಯೋತ್ಪಾದಕರು ಎರಡು ತಂಡಗಳಲ್ಲಿ ಮುಗಿಬಿದ್ದ ಕಾರಣ ಭಾರತೀಯ ಸೇನೆ ಕೂಡ ತಕ್ಕ ತಿರುಗೇಟು ಕೊಟ್ಟಿದೆ. ಎರಡು ತಂಡಗಳಾಗಿ ಆಗಮಿಸಿದ್ದ ಉಗ್ರರಿಗೆ ಸೇನಾ ಪಡೆ ತಕ್ಕ ಉತ್ತರ ಕೊಟ್ಟಿದ್ದಾರೆ. ಬಿಎಸ್ಎಫ್, ಸಿಆರ್ಪಿಎಫ್ ಮತ್ತು ಪೊಲೀಸ್ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನ ಹೊಡೆದುರುಳಿಸಲಾಗಿದೆ. ಮತ್ತಿಬ್ಬರನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ದುರಂತ ಅಂದ್ರೆ ಈ ಅಟ್ಯಾಕ್ನಲ್ಲಿ ಭಾರತ ಗಡಿ ಭದ್ರತಾ ಪಡೆಯ ಯೋಧನೊಬ್ಬ ಹುತಾತ್ಮನಾಗಿದ್ದು ಮತ್ತೊಬ್ಬನ ಸ್ಥಿತಿ ಕೂಡ ಗಂಭೀರವಾಗಿದೆ ಅಂತ ಹೇಳಲಾಗುತ್ತಿದೆ. ಇದು ಲಷ್ಕರ್ ಇ ತೈಬಾದ ಕೃತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆಯೇ ಭಾರತದೊಳಕ್ಕೆ ನುಸುಳಿದ ಉಗ್ರರು ಈ ದಾಳಿ ನಡೆಸಿದ್ದಾರೆ. ಪಲ್ಲಾನ್ ವಾಲಾ ವಲಯದಲ್ಲಿ ಪಾಕಿಸ್ತಾನ ಸೇನೆ ಶನಿವಾರ ಗುಂಡಿನ ದಾಳಿ ನಡೆಸಿತ್ತು. ಇನ್ನು ವಾಘಾ ಗಡಿಯಲ್ಲಿ ಪಾಕಿಸ್ತಾನಿಯರು ಭಾರತೀಯ ಸೇನೆ ಮೇಲೆ ಕಲ್ಲು ತೂರಾಟ ನಡೆಸಿದ ವರದಿಯಾಗಿದೆ.

ಸರ್ಜಿಕಲ್ ಸ್ಟ್ರೈಕ್ ನಂತರ ಭಾರತೀಯ ಸೇನಾ ಕ್ಯಾಂಪ್ ಹಾಗೂ ಚೆಕ್ ಪೊೀಸ್ಟ್ ಗಳ ಮೇಲೆ ದಾಳಿಗಳಾಗಬಹುದು ಎಂದು ಗುಪ್ತಚರ ಇಲಾಕೆ ಎಚ್ಚರಿಕೆ ನೀಡಿತ್ತು. ಉಗ್ರರು ಉರಿ ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿದ್ದ ವೇಳೆ ಹತ್ತೊಂಬತ್ತು ಉಗ್ರರು ಮೃತಪಟ್ಟಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಗಡಿನಿಯಂತ್ರಣ ರೇಖೆ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ನಾಶಗೊಳಿಸಿತ್ತು. ಇನ್ನು ಗಡಿಯಲ್ಲಿ ನಡೀತಿದ್ದ ಭಾರೀ ಫೈರಿಂಗ್ ಬಗ್ಗೆ ಬಿಎಸ್’ಎಫ್ ಚೀಫ್ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕ್ಷಣಕ್ಷಣದ ಮಾಹಿತಿ ನೀಡುತ್ತಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ಕೇಂದ್ರ ಗೃಹ ಸಚಿವರ ಜೊತೆ ನಿರಂತರ ಸಂಪರ್ಕ ಹೊಂದಿದ್ದರು. ಇನ್ನು ಝೇಲಂ ನದಿ ಮೂಲಕ ಉಗ್ರರು ಒಳನುಸುಳಿದ್ದಾರೆ ಅನ್ನೋ ಶಂಕೆ ಬಲವಾಗಿದೆ. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಬಾರಾಮುಲ್ಲಾ ಅಟ್ಯಾಕ್ ತಹಬದಿಗೆ ಬಂದಿದೆ. ಇತ್ತೀಚಿನ ಸರ್ಜಿಕಲ್ ದಾಳಿ ಬಳಿಕ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿತ್ತು. ಆದರೆ ಕಳೆದ ರಾತ್ರಿಯ ಬಾರಾಮುಲ್ಲಾ ಸೇನಾ ನೆಲೆಯ ಮೇಲಿನ ದಾಳಿ ಪ್ರಮುಖವಾಗಿದೆ.

► Follow us on –  Facebook / Twitter  / Google+

Sri Raghav

Admin