ಇಬ್ಬರು ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರ, ಅಧಿಕಾರಿ ಸೇರಿ ಮೂವರ ವಿರುದ್ದ ಕೇಸ್
ಮಥುರಾ, ನ.9-ಸಮಾಜಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರೇ ತಮ್ಮ ಇಲಾಖೆಯ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಮಥುರಾದ ಇಬ್ಬರು ಮಹಿಳಾ ಕಾನ್ಸೆಟೆಬಲ್ಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲ ಪ್ರಕರಣದಲ್ಲಿ, ಗ್ವಾಲಿಯರ್ನ ಮಹಿಳಾ ಪೇದೆ ಮೇಲೆ ಅತ್ಯಾಚಾರ ಎಸಗಲಾಗಿದೆ. ನರೇಂದ್ರ ಮತ್ತು ಬಬ್ಬಲ್ ಎಂಬುವರು ತಮ್ಮನ್ನು ಬಲವಂತವಾಗಿ ಮಥುರಾದ ಕೃಷ್ಣಾನಗರದ ಸ್ಥಳೀಯ ಹೊಟೇಲ್ಗೆ ಕರೆದೊಯ್ದರು. ನಂತರ ನರೇಂದ್ರ ಕೊಠಡಿಯಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ. ಹೊಟೇಲ್ ಮಾಲೀಕ ಬಬ್ಬಲ್ ಈ ಕೃತ್ಯಕ್ಕೆ ಸಾಥ್ ನೀಡಿ ಹೊರಗೆ ಕಾವಲು ನಿಂತಿದ್ದಾಗಿ ಗ್ವಾಲಿಯರ್ನ ಮಹಿಳಾ ಪೇದೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮೇಲೆಯೇ ಪೇದೆಯೊಬ್ಬ ಅತ್ಯಾಚಾರ ನಡೆಸಿದ್ದಾನೆ. ಪೇದೆ ಸತ್ಯೇಂದ್ರ ಸಿಂಗ್ ತಮ್ಮನ್ನು ಮಥುರಾ ಜಂಕ್ಷನ್ ಬರುವಂತೆ ತಿಳಿಸಿದರು. ತಾವು ಅಲ್ಲಿಗೆ ಹೋದಾಗ ಮತ್ತು ಬರಿಸುವ ಪಾನೀಯ ನೀಡಿ ಪ್ರಜ್ಞೆ ತಪ್ಪಿಸಿ ತಮ್ಮ ಮೇಲೆ ಸಿಂಗ್ ಅತ್ಯಾಚಾರ ನಡೆಸಿರುವುದಾಗಿ ಅವರು ದೂರು ನೀಡಿದ್ದಾರೆ. ನನ್ನನ್ನು ವಿವಾಹವಾಗಲು ಸಿಂಗ್ ಬಲವಂತ ಮಾಡಿದ್ದ. ನಾನು ನಿರಾಕರಿಸಿದ್ದೆ. ಆ ದ್ವೇಷದಿಂದ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಈ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಮಥುರಾದ ವೃಂದಾವನ ಪ್ರದೇಶದಲ್ಲಿ ಆಶ್ರಮದ ಮುಖ್ಯಸ್ಥನೊಬ್ಬ ಇತ್ತೀಚೆಗೆ ವಿವಾಹಿತೆ ಮೇಲೆ ಅತ್ಯಾಚಾರ ಎಸಗಿದ್ದ ಕೃತ್ಯವನ್ನು ಇಲ್ಲಿ ಉಲ್ಲೇಖಿಸಬಹುದು.
► Follow us on – Facebook / Twitter / Google+