ಇರಾಕಿ ಸೇನೆಯ 15 ಯೋಧರ ಶಿರಚ್ಛೇದ ಮಾಡಿದ ಐಎಸ್ ಉಗ್ರರು

ISIS02

ಮೊಸುಲ್, ನ.24-ಕೌರ್ಯಕ್ಕೆ ಮತ್ತೊಂದು ಹೆಸರಾಗಿರವ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು 15 ಇರಾಕಿ ಯೋಧರ ಶಿರಚ್ಛೇದ ಮಾಡಿ ಶವಗಳನ್ನು ಮೆರವಣಿಗೆ ಮಾಡಿರುವ ಬರ್ಬರ ಘಟನೆ ಇರಾಕ್‍ನ ಮೊಸುಲ್‍ನಲ್ಲಿ ನಡೆದಿದೆ.  ಐಎಸ್ ಉಗ್ರಗಾಮಿಗಳ ವಶದಲ್ಲಿರುವ ಇರಾಕ್‍ನ ಎರಡನೇ ಅತ್ಯಂತ ದೊಡ್ಡ ಪಟ್ಟಣ ಮೊಸುಲ್‍ನಲ್ಲಿ ಬಂಡುಕೋರರನ್ನು ಸದೆಬಡಿಯಲು ಅಂತಿಮ ಹಂತದ ಕಾರ್ಯಾಚರಣೆ ಕೈಗೊಂಡಿರುವ ಇರಾಕಿ ಸೇನೆ ನಗರವನ್ನು ಸುತ್ತುವರಿದಿರುವ ಸಂದರ್ಭದಲ್ಲೇ ಈ ದುಷ್ಕøತ್ಯ ನಡೆದಿದೆ.  ಸೆರೆ ಸಿಕ್ಕಿದ 15 ಉಗ್ರರನ್ನು ಸಾಲಾಗಿ ನಿಲ್ಲಿಸಿ ಅವರ ತಲೆಗಳನ್ನು ಕತ್ತರಿಸುವ ಘೋರ ದೃಶ್ಯವನ್ನು ಸಾವಿರಾರು ಮುಗ್ಧರು ಅಸಹಾಯಕತೆಯಿಂದ ವೀಕ್ಷಿಸಿದರು ಎಂದು ಸ್ಥಳೀಯ ಅರಾ ನ್ಯೂಸ್ ವರದಿ ಮಾಡಿದೆ.

ವಾಯುವ್ಯ ಮೊಸುಲ್ ನಗರದಲ್ಲಿ ಕಳೆದ ವಾರ ಭೀಕರ ಘರ್ಷಣೆ ನಂತರ ಇರಾಕ್‍ನ ಈ ಯೋಧರನ್ನು ಉಗ್ರರು ಸೆರೆಯಾಳಾಗಿಟ್ಟುಕೊಂಡಿದ್ದರು.  ಐಎಸ್ ಪ್ರಾಬಲ್ಯವಿರುವ ಪ್ರದೇಶಗಳನ್ನು ಸೇನಾಪಡೆಗಳು ಸುತ್ತುವರಿದಿದ್ದು, ಅಂತಿಮ ಹಂತದ ಶಸ್ತ್ರಾಸ್ತ್ರ ಸಂಘರ್ಷ ನಡೆಯುತ್ತಿದೆ.  ಮೊಸುಲ್‍ನಿಂದ ಐಎಸ್ ಉಗ್ರರನ್ನು ಹೊರದಬ್ಬಲು ಅಕ್ಟೋಬರ್ 17ರಿಂದ ಅಮೆರಿಕ ಬೆಂಬಲದೊಂದಿಗೆ ಇರಾಕಿ ಸೇನೆ, ಸ್ಥಳೀಯ ಶಿಯಾ ಮುಸ್ಲಿಮರು ಮತ್ತು ಕುರ್ದಿಶ್ ಪಡೆಗಳು ಹೋರಾಟ ನಡೆಸುತ್ತಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin