ಇರಾಕ್‍ನ ಬಾಗ್ದಾದ್ ಮತ್ತು ಮೊಸುಲ್’ನಲ್ಲಿ ಸರಣಿ ಆತ್ಮಾಹುತಿ ಸ್ಫೋಟ : 12 ಸಾವು

Suicide-Bombin-g

ಬಾಗ್ದಾದ್, ಫೆ.11-ಇರಾಕ್‍ನ ಬಾಗ್ದಾದ್ ಮತ್ತು ಮೊಸುಲ್ ನಗರಗಳಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, ಇತರ 22 ಜನ ತೀವ್ರ ಗಾಯಗೊಂಡಿದ್ದಾರೆ. ಈ ದಾಳಿಗಳಿಗೆ ತಾನೇ ಕಾರಣ ಎಂದು ಇರಾಕ್ ಮತ್ತು ಸಿರಿಯಾದ ಪ್ರಮುಖ ಭಾಗಗಳ ಮೇಲೆ ಹಿಡಿತ ಹೊಂದಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನೆ ಸಂಘಟನೆ ಆನ್‍ಲೈನ್ ಹೇಳಿಕೆ ನೀಡಿದೆ.   ಇತ್ತೀಚೆಗಷ್ಟೇ ಐಎಸ್ ಉಗ್ರರ ವಶದಿಂದ ವಿಮೋಚನೆಯಾದ ಮೊಸುಲ್‍ನ ಪೂರ್ವ ಭಾಗದಲ್ಲಿರುವ ಸಯೀದತಿ ಅಲ್-ಜಮೀಲಾ (ಮೈ ಫೇರ್ ಲೇಡಿ) ರೆಸ್ಟೋರೆಂಟ್‍ನಲ್ಲಿ ಉಗ್ರಗಾಮಿಯೊಬ್ಬ ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ ಆರು ಮಂದಿ ಸಾವಿಗೀಡಾಗಿ, 15ಕ್ಕೂ ಹೆಚ್ಚು ಜನ ಗಾಯಗೊಂಡರು.

ಇದೇ ಪ್ರದೇಶದಲ್ಲಿ ನಡೆದ ಕಾರ್‍ಬಾಂಬ್ ಸ್ಫೋಟದಲ್ಲಿ ಯೋಧನೊಬ್ಬ ಮೃತಪಟ್ಟು, ಇತರ ನಾಲ್ವರಿಗೆ ಗಾಯಗಳಾಗಿವೆ. ದಕ್ಷಿಣ ಬಾಗ್ದಾದ್‍ನ ಇಲಾಮ್ ಜಿಲ್ಲೆಯಲ್ಲಿ ನಡೆದ ಇನ್ನೊಂದು ಕಾರ್‍ಬಾಂಬ್ ಆಸ್ಫೋಟದಲ್ಲಿ ಐವರು ಹತರಾಗಿ, 14 ಮಂದಿಗೆ ತೀವ್ರ ಗಾಯಗಳಾಗಿವೆ.   ಇರಾಕ್‍ನ ಕೊಕ್‍ಝಾಲಿ ಉಪ ಪಟ್ಟಣದಲ್ಲಿ ಕಳೆದ ಡಿಸೆಂಬರ್ 22ರಂದು ನಡೆದ ತ್ರಿವಳಿ ಕಾರ್‍ಬಾಂಬ್ ಸ್ಫೋಟದಲ್ಲಿ ಕನಿಷ್ಠ 23 ಮಂದಿ ಹತರಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin