ಇರುವೆ ಗೂಡಿನ ಮೇಲೆ ನಿಲ್ಲಿಸಿ ಬಾಲಕನಿಗೆ ಥಳಿತ

ANT

ಹಾಸನ, ಅ.5- ತೆಂಗಿನ ಮರ ಹತ್ತಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ ಯುವಕರ ಗುಂಪೊಂದು ಬಾಲಕನನ್ನು ಇರುವೆ ಗೂಡಿನ ಮೇಲೆ ನಿಲ್ಲಿಸಿ ಥಳಿಸಿರುವ ಅಮಾನವೀಯ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಹಾಸನದಲ್ಲಿ ಯುವಕನನ್ನು ಹಾಡಹಗಲೇ ಗುಂಪೊಂದು ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಅರಸೀಕೆರೆಯಲ್ಲಿ ಬಾಲಕನ ಮೇಲೆ ಯುವಕರ ಗುಂಪು ಮಾನವೀಯತೆ ಮರೆತು ಹಲ್ಲೆ ನಡೆಸಿರುವ ಘಟನೆಯಿಂದಾಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕಾಲು ಹಿಡೀತಿನಿ ಬಿಡಿ ಭಯ್ಯಾ… ಇರುವೆ ಕಡೀತಿದೆ ಬಿಡಿ ಭಯ್ಯಾ… ಭಯ್ಯಾ… ಎಂದು ಬಾಲಕ ಪರಿಪರಿಯಾಗಿ ಕೇಳಿಕೊಂಡರೂ ಯುವಕರು ಜಾಲಿಮರದ ಮುಳ್ಳುಗಳಿಂದ ಬಾಲಕನನ್ನು ಥಳಿಸಿ ಕ್ರೂರವಾಗಿ ವರ್ತಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin